Tuesday, October 26, 2021

ದಲಿತ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ 5 ಆರೋಪಿಗಳನ್ನು 36 ಗಂಟೆಗಳಲ್ಲಿ ಬಂಧಿಸಿದ ಪೋಲೀಸರು…

Must read

ರಾಜಸ್ಥಾನದ ಜಲೋರ್ ನಲ್ಲಿ ದಲಿತ ಯುವಕರನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು 36 ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಥಳಿಸಿರುವ ವಿಡಿಯೋ ವೈರಲ್ ಆದ ನಂತರ ಥಳಿಸಿದ ನಂತರ ಪೊಲೀಸರು ಕ್ರಮಕ್ಕೆ ಮುಂದಾದರು. ನಾಲ್ವರು ಆರೋಪಿಗಳನ್ನು ಜೋಧಪುರದಿಂದ ಬಂಧಿಸಲಾಗಿದ್ದು, ಐದನೇ ಆರೋಪಿಯನ್ನು ಜಾಲೂರಿನಿಂದ ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಜಿತೇಂದ್ರ ಸಿಂಗ್, ಹೇಮ್ ಸಿಂಗ್, ನರಪತ್ ಸಿಂಗ್, ದಿಲೀಪ್ ವೈಷ್ಣವ್ ಮತ್ತು ಪಿಂಟು ಅಲಿಯಾಸ್ ಜಿತು ಎಂದು ಗುರುತಿಸಲಾಗಿದೆ ಎಂದು ಜಲೋರ್ ಎಸ್ಪಿ ಶ್ಯಾಮ್ ಸಿಂಗ್ ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ವಿಷೇಶ ಪೊಲೀಸ್ ತಂಡವನ್ನ ರಚಿಲಾಗಿತ್ತು .36 ಗಂಟೆಗಳಲ್ಲಿ ಜೋಧ್‌ಪುರ ಮತ್ತು ಜಾಲೂರಿನಿಂದ ಐವರು ಆರೋಪಿಗಳನ್ನು ಬಂಧಿಸಿದರು.

ಜಲೋರ್ ನಿಂದ ವೈರಲ್ ಆದ ವೀಡಿಯೋ ಬಗ್ಗೆ ಮಾಹಿತಿ ಪಡೆದ ಎಎಸ್‌ಪಿ ಅನುಕ್ರತಿ ಉಜ್ಜೈನಿಯವರು ಸಂತ್ರಸ್ತನನ್ನ ಕೂಡಲೇ ಗುರುತಿಸಿ ಹೇಳಿಕೆ ಪಡೆದುಕೊಂಡಿದ್ದಾರೆ.ಸದ್ಯ ವೈದ್ಯಕೀಯ ಪರೀಕ್ಷಗೆ ಒಳಪಡಿಸಲಾಗಿದೆ. ಸಂತ್ರಸ್ತ ತನ್ನ ಹೇಳಿಕೆಯಲ್ಲಿ, ಅಕ್ಟೋಬರ್ 1 ರ ಸಂಜೆ 4 ಗಂಟೆ ಸುಮಾರಿಗೆ, ಆತ ತನ್ನ ಸ್ನೇಹಿತರೊಂದಿಗೆ ಜಲೋರಿನ ಅಂಗಡಿಯಲ್ಲಿ ಕುಳಿತಿದ್ದಾಗ ಆರೋಪಿಗಳು ಬಂದು ತನ್ನ ವಿರುದ್ಧ ಜಾತಿವಾದಿ ನಿಂದನೆ ಮಾಡಿದರು ಎಂದು ಹೇಳಿದರು. ನಂತರ ದಲಿತ ಯುವಕನ ಮೇಲೆ ಆರೋಪಿಗಳು ಹಲ್ಲೆ ಮಾಡಿ , ಕ್ರೂರವಾಗಿ ಥಳಿಸಿದ್ದಾರೆ. ದಲಿತ ಯುವಕನ ಮೇಲೆ ಹಲ್ಲೆ ಮಾಡುವ ದೃಶ್ಯವನ್ನ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದರು.

More articles

Latest article