Tuesday, November 29, 2022

ಹಾಡಹಗಲೇ ಬಿಜೆಪಿ ಪುರಸಭೆ ಸದಸ್ಯನ ಮೇಲೆ ಹಲ್ಲೆ

Must read

ಮೈಸೂರು: ಹಾಡಹಗಲೇ ಬಿಜೆಪಿ ಪುರಸಭೆ ಸದಸ್ಯನ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಟಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.

ಟಿ.ನರಸೀಪುರ ಪುರಸಭೆ ವಾರ್ಡ್ ನಂಬರ್ 23ರ ಸದಸ್ಯ ಎಸ್.ಕೆ.ಕಿರಣ್ ಹಲ್ಲೆಗೊಳಗಾದವರು. ಘಟನೆ ಬಗ್ಗೆ ಸ್ವಪಕ್ಷದ ವಿರುದ್ಧವೆ ಬಿಜೆಪಿ ಮುಖಂಡರು, ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಘಟನೆ ಕುರಿತು ಮಾಜಿ ಶಾಸಕ ಡಾ.ಭಾರತಿಶಂಕರ್ ಮಾತನಾಡಿ, ನರಸೀಪುರ ತಾಲೂಕಿಗೆ ಇತಿಹಾಸವಿದೆ. ಕೋಮು ಸೌಹಾರ್ದತೆಗೆ ಹೆಸರು ವಾಸಿಯಾಗಿದೆ. ಇಂತಹ ಸ್ಥಳದಲ್ಲಿ ಬಿಜೆಪಿ ಪುರಸಭೆ ಸದಸ್ಯನ ಮೇಲೆ ಹಲ್ಲೆ ನಡಿದಿರುವುದು ದುರ್ದೈವ.

ನರಸೀಪುರದಲ್ಲಿ ಕಾನೂನು ಸುವ್ಯವಸ್ಧೆ ಬಗ್ಗೆ ಭಯವಿಲ್ಲದಂತಾಗಿದೆ. ತಾಲ್ಲೂಕಿನಾದ್ಯಂತ ಭೂ ಮಾಫಿಯಾ ನಡೆಯುತ್ತಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನಮ್ಮ ಪಕ್ಷದ ಸದಸ್ಯರ ಮೇಲೆ ಹಲ್ಲೆ ಮಾಡಲಾಗಿದೆ. ಕೂಡಲೇ ಹಲ್ಲೆ ಮಾಡಿರುವ ಆರೋಪಿಗಳನ್ನ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

Latest article