Monday, January 30, 2023

ಅಪರಿಚಿತ ದುಷ್ಕರ್ಮಿಗಳಿಂದ ಚರ್ಚ್‌ ದ್ವಂಸ

Must read

ಅಪರಿಚಿತ ದುಷ್ಕರ್ಮಿಗಳು ಚರ್ಚಿನ ಬಾಲ ಯೇಸು ಪ್ರತಿಮೆ ಸೇರಿದಂತೆ ಹಲವಾರು ಉಪಕರಣಗಳ ದ್ವಂಸಗೊಳಿಸಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಗೋಣಿಕೊಪ್ಪ ರಸ್ತೆಯಲ್ಲಿರುವ ಸೆಂಟ್ ಮೇರಿ ಚರ್ಚ್‌ನಲ್ಲಿ ನಡೆದಿದೆ . ಭಾನುವಾರದಂದು ನಡೆದ ಕ್ರಿಸ್ಮಸ್ ಪ್ರಯುಕ್ತ ಬಂದು ಹೋಗುವ ಪ್ರಾರ್ಥನಾ ವ್ಯಕ್ತಿಗೆ ಅನುಕೂಲವಾಗಲೆಂದು ಹಲವಾರು ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮಂಗಳವಾರ ಸಂಜೆ 6 ಗಂಟೆಯ ಸಮಯದಲ್ಲಿ ಚರ್ಚಿನ ಫಾದರ್ ಜಾನ್ ಪೌಲ್ ಒಳಗೆ ಹೋಗಿ ನೋಡಿದಾಗ ಎಂಟು ಧ್ವನಿ ವರ್ಗಗಳು, ಮುಂಬತ್ತಿ ಟೇಬಲ್ ಮತ್ತು ಹೂಕುಂಡಗಳು, ಸೀರಿಯಲ್ ಸೆಟ್ ಹಾಗೂ ಗೋಲ್ಕಗಳನ್ನು ನಾಶಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಫಾದರ್ ಜಾನ್ ಪೌಲ್ ದೂರು ನೀಡಿದ್ದು ದೂರು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೃತ್ಯ ನಡೆಸಿದ ವ್ಯಕ್ತಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Latest article