Sunday, October 2, 2022

ಶೌಚಾಲಯದಲ್ಲೇ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಮಾಡಿದ ಮೋದಿ ಸರ್ಕಾರ

Must read

ಮೋದಿ ಸರ್ಕಾರ ಬಂದಾಗಿನಿಂದ ಕ್ರೀಡಾಪಟುಗಳಿಗೆ ಹೆಚ್ಚಾಗಿ ಪ್ರೋತ್ಸಾಹ ಸಿಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಭಾರತೀಯ ಕ್ರೀಡಾಪಟುಗಳಿಗೆ ಸರ್ಕಾರದಿಂದ ಹೆಚ್ಚಿನ ಬೆಂಬಲ ಸಿಗುತ್ತಿದೆ. ಅಲ್ಲದೇ ಮಿನಿ ಒಲಿಂಪಿಕ್ಸ್​, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಮೋದಿ ಸರ್ಕಾರಕ್ಕೆ ಮೆಚ್ಚುಗೆ ಕೂಡ ಕೇಳಿ ಬಂದಿತ್ತು. ಆದ್ರೀಗ ಕ್ರೀಡಾಪಟುಗಳಿಗೆ ಸರಿಯಾದ ಪ್ರಾಮುಖ್ಯತೆ ಸಿಗುತ್ತಿಲ್ಲ ಅನ್ನೋದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಹಾಕಿ, ಕಬ್ಬಡಿ ಕ್ರೀಡಾಪಟುಗಳಿಗೆ ಗೌರವವೇ ಸಿಗುತ್ತಿಲ್ಲ. ಯಾಕಂದ್ರೆ ಕ್ರೀಡಾಪಟುಗಳಿಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಪ್ರದೇಶದ ಸಹರಾನ್​ಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಶೌಚಾಲಯದಲ್ಲೇ ಆಹಾರ ತಯಾರಿಸಿ ಕ್ರೀಡಾಪಟುಗಳಿಗೆ ಊಟ ಬಡಿಸಿರುವ ಆರೋಪ ಕೇಳಿಬಂದಿದೆ. ಸಹರಾನ್​ಪುರ್​ ಎಂಬಲ್ಲಿ 3 ದಿನಗಳ ಕಾಲ 17 ವರ್ಷದೊಳಗಿನವರಿಗೆ ನಡೆದಿದ್ದ ಕಬ್ಬಡಿ ಪಂದ್ಯವನ್ನ ಏರ್ಪಡಿಸಲಾಗಿತ್ತು. ಈ ವೇಳೆ ಇಂತಹ ಅಮಾನವೀಯ ಘಟನೆ ನಡೆದಿದೆ.

ಅದು ಕೂಡ ರಾಜ್ಯ ಮಟ್ಟದ ಕಬ್ಬಡಿ ಟೂರ್ನಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು ಅಸಹ್ಯ ಎನಿಸುವಂತಿದೆ. ಶೌಚಾಲಯದಲ್ಲೇ ಊಟವನ್ನ ತಯಾರಿಸಿ, ಅಲ್ಲೇ ಊಟ ಬಡಿಸಲಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 200 ಕ್ರೀಡಾಪಟುಗಳಿಗೆ ಶೌಚಾಲಯದಲ್ಲೇ ಆಹಾರ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಟಾಯ್ಲೆಟ್​ ಒಳಗಡೆಯೇ ಕಾಗದದ ಮೇಲೆ ಪೂರಿ ಇಟ್ಟು ಬಡಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದ್ದು ಯೋಗಿ ಸರ್ಕಾರದ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ.

Latest article