Thursday, January 20, 2022

ಅ.26ರಂದು ನಡೆದಿದ್ದ ಕಳ್ಳತನ ಪ್ರಕರಣ: ಬಾಲ ಆರೋಪಿ ಸೇರಿದಂತೆ 6 ಮಂದಿ ಅರೆಸ್ಟ್​

Must read

ವಿಜಯನಗರ: ಹೊಸಪೇಟೆಯ ವಿವೇಕಾನಂದ ನಗರದಲ್ಲಿ ಅಕ್ಟೋಬರ್ 26ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಹೊಸಪೇಟೆ ಪೊಲೀಸರು ಬೇಧಿಸಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ 6 ಜನರನ್ನು ಬಂಧಿಸಲಾಗಿದೆ.

ಓರ್ವ ಬಾಲ ಆರೋಪಿ ಸೇರಿದಂತೆ ಆನಂದ್, ತಾಯಪ್ಪ, ಮಂಜುನಾಥ, ಸಿದ್ದರಾಜು, ನಿತಿನ್ ಬಂಧಿತ ಆರೋಪಿಗಳು. ಬಂಧಿತರಿಂದ 508 ಗ್ರಾಂ ಚಿನ್ನ, 3,797 ಕೆಜಿ ಬೆಳ್ಳಿ ಆಭರಣ ಹಾಗೂ 2 ರ್ಯಾಡೋ ವಾಚ್​ ಸೇರಿದಂತೆ 23,94,450 ರೂ. ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ಎಸ್​ಪಿ ಕೆ.ಅರುಣ್ ಹೇಳಿದ್ದಾರೆ.

Latest article