ಮತ್ತೋರ್ವ ಬಿಜೆಪಿ ಎಂ.ಎಲ್.ಎ ಮಗನ ಕಾರು ಪಲ್ಟಿ, ಆಸ್ಪತ್ರೆಗೆ ದಾಖಲು!

ಮತ್ತೋರ್ವ ಬಿಜೆಪಿ ಎಂ.ಎಲ್.ಎ ಮಗನ ಕಾರು ಪಲ್ಟಿ, ಆಸ್ಪತ್ರೆಗೆ ದಾಖಲು!

ಬಿಜೆಪಿ ಶಾಸಕ ವನತಿ ಶ್ರೀನಿವಾಸನ್ ಅವರ ಪುತ್ರ ಆದರ್ಶ್ ಶ್ರೀನಿವಾಸನ್ ಅವರು ಭಾನುವಾರ ತಡರಾತ್ರಿ ಕಂದಂಪಟ್ಟಿ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದು, ಪೊಲೀಸರ ಪ್ರಕಾರ, ಅವರು ಕೊಯಮತ್ತೂರಿನಿಂದ ಚೆನ್ನೈಗೆ ಹೋಗುತ್ತಿದ್ದಾಗ ಬಟರ್‌ಫ್ಲೈ ರೋಡಿನಲ್ಲಿ ಕಾರು ಉರುಳಿಬಿದ್ದು ಈ ಘಟನೆ ಸಂಭವಿಸಿದೆ. ಆದರ್ಶ್‌ಗೆ ಪ್ರಥಮ ಚಿಕಿತ್ಸೆ ನೀಡಿ ಇನ್ನೊಂದು ಕಾರಿನಲ್ಲಿ ಚೆನ್ನೈಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆನಂತರ ಕಾರನ್ನು ಅನಧನಪಟ್ಟಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.
TV 5 Kannada
tv5kannada.com