Tuesday, August 16, 2022

ಮಾನಸಿಕ ಖಿನ್ನತೆ: ಬಾವಿಗೆ ಹಾರಿ ಸಾವಿಗೆ ಶರಣಾದ ವ್ಯಕ್ತಿ

Must read

ಹುಬ್ಬಳ್ಳಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಬಾವಿಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ನಡೆದಿದೆ.

ಗುಡಗೇರಿ ಗ್ರಾಮದ ಬಾಹುಬಲಿ ಸಾವಿಗೆ ಶರಣಾದ ವ್ಯಕ್ತಿ. ಮಾನಸಿಕವಾಗಿ ನೊಂದಿದ್ದ ಬಾಹುಬಲಿ, ನಿನ್ನೆ ತಡರಾತ್ರಿ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.

ಈ ಸಂಬಂಧ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

 

Latest article