Thursday, January 20, 2022

ಅನುಮತಿಯಿಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ..!

Must read

ವಾಷಿಂಗ್ಟನ್: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ 16 ವರ್ಷದ ಮಗಳನ್ನು ತಂದೆಯೇ ಗುಂಡಿಕ್ಕಿ ಕೊಂದ ಘಟನೆ ವಾಷಿಂಗ್ಟನ್​ನ ಓಹಿಯೋದಲ್ಲಿ ನಡೆದಿದೆ.

ಜಾನೆ ಹೇರ್‍ಸ್ಟನ್ ತಂದೆಯಾದ ಗುಂಡಿಗೆ ಬಲಿಯಾದ ಮಗಳು. ಈಕೆಯ ತಂದೆ ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿದ್ದಾನೆ. ನಂತರ ಅದು ತನ್ನ ಮಗಳು ಎಂದು ತಿಳಿದು ತಂದೆ ಫುಲ್ ಶಾಕ್​ಗೊಳಗಾಗಿದ್ದಾರೆ. ತಕ್ಷಣ ಜಾನೆ ಹೇರ್‍ಸ್ಟನ್​ನ ತಾಯಿ ತುರ್ತು ಸೇವೆಗೆ ಕರೆ ಮಾಡಿದ್ದಾರೆ.

ಬಳಿಕ ಆ್ಯಂಬುಲೆನ್ಸ್​ ಮೂಲಕ ಜಾನೆ ಹೇರ್‍ಸ್ಟನ್​ಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.

Latest article