Wednesday, May 18, 2022

ಶಶಿಕಲಾ ಜೈಲುವಾಸ ಅಂತ್ಯ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ

Must read

ಬೆಂಗಳೂರು: ಸುಧೀರ್ಘ ನಾಲ್ಕು ವರ್ಷದ ಬಳಿಕ ಶಶಿಕಲಾ ಅಭಿಮಾನಿಗಳಲ್ಲಿ ಇಂದು ಸಂಭ್ರಮದ ದಿನ. ಪರಪ್ಪನ ಅಗ್ರಹಾರದ ವಾಸಿಯಾಗಿದ್ದ ಚಿನ್ನಮ್ಮ ಈಗ ಸ್ವತಂತ್ರ ಮಹಿಳೆ . ಯಸ್ ಇಂದು ಶಿಕ್ಷೆ ಪೂರೈಸಿದ ಹಿನ್ನಲೆ ಶಶಿಕಲಾ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ನೆರದಿದ್ದರು.

ಅಕ್ರಮ ಹಣ ಸಂಪಾದನೆ ಆರೋಪದಡಿ ಶಿಕ್ಷೆಗೊಳಗಾಗಿದ್ದ ಶಶಿಕಲಾಗೆ ಇಂದು ಬಿಡುಗಡೆ ಭಾಗ್ಯ. ಕಳೆದ ಐದು ದಿನಗಳ ಹಿಂದೆ ಉಸಿರಾಟದ ತೊಂದರೆಯಾದ ಹಿನ್ನಲೆ ಬೌರಿಂಗ್ ಆಸ್ಪತ್ರೆಗೆ ಬಂದಿದ್ದ ಶಶಿಕಲಾರನ್ನ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಮಧ್ಯೆ ಶಶಿಕಲಾ ಅವರ ಶಿಕ್ಷೆಯ ಅವಧಿ ಕೂಡ ಮುಗಿದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು.

ಇಂದು ಬೆಳಗಿನ ಜಾವ ಪರಪ್ಪನ ಅಗ್ರಹಾರದ ಜೈಲು ಸಿಬ್ಬಂಧಿಗಳು ಸುಮಾರು 11 ಗಂಟೆಯ ಸಂಧರ್ಭದಲ್ಲಿ ಆಸ್ಪತ್ರೆಗೆ ಆಗಮಿಸಿದ್ರು. ಶಶಿಕಲಾ ಕೋವಿಡ್ ಪೇಶೇಂಟ್ ಆಗಿರುವ ಹಿನ್ನೆಲೆ ನೇರವಾಗಿ ಜೈಲು ಅಧಿಕಾರಿಗಳು ಭೇಟಿಯಾಗದೆ, ಅಲ್ಲಿದ್ದ ವೈಧ್ಯಾಧಿಕಾರಿಗಳ ಮುಖಾಂತರ ತಾವು ತಂದಿದ್ದ ಫಾರ್ಮ್​ಗಳಿಗೆ ಸಹಿಯನ್ನ ಹಾಕಿಸಿದರು. ನಂತರ ಎಲ್ಲಾ ಖೈದಿಗಳು ರಿಲೀಸ್ ಆಗುವಾಗ ನಡೆಸುವಂತಹ ಪ್ರೋಸೀಝರ್​ನಂತೆ ಶಶಿಕಲಾರ ವೈದ್ಯಕೀಯ ಪರೀಕ್ಷಾಅ ವರದಿಯನ್ನ ಪಡೆದು ವಾಪಾಸಾದರು. ಯಾವಾಗ ಶಶಿಕಲಾ ಅಧಿಕೃತವಾಗಿ ಬಿಡುಗಡೆಯ ಸುದ್ಧಿ ತಿಳಿಯಿತೋ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದ ನೂರಾರು ಕಾರ್ಯಕರ್ತರು ಸಿಹಿ ಹಂಚುವ ಮುಖಾಂತರ ಸಂಭ್ರಮಾಚರಣೆ ನಡೆಸಿದರು.

ಇನ್ನು ಶಶಿಕಲಾ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಕಾಶವಿತ್ತು. ಆದ್ರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಉತ್ತಮ ರೀತಿಯಲ್ಲಿರುವ ಕಾರಣ ಅಲ್ಲಿಯೇ ಚಿಕಿತ್ಸೆ ಮುಂದಯವರೆಸುವ ನಿರ್ಧಾರ ಮಾಡಿದರು. ಇನ್ನು ಇದೇ ಸಂಧರ್ಭದಲ್ಲಿ ಪಕ್ಷದ ಮುಖಂಡರು ಮಾತನಾಡಿ ಇನ್ನೇನು ನಾಲ್ಕೈದು ದಿನಗಳಲ್ಲಿ ಬಿಡುಗಡೆಯಾಗುವ ಶಶಿಕಲಾರಿಗೆ ಭವ್ಯ ಸ್ವಾಗತ ಮಾಡುವ ಮುಖಾಂತರ ತಮ್ಮೂರಿಗೆ ಕರೆಸಿಕೊಳ್ಳೊದಾಗಿ ಹೇಳಿಕೊಂಡಿದ್ದಾರೆ.

ಇನ್ನು ಅಧಿಕೃತವಾಗಿ ಬಿಡುಗಡೆಯಾದ್ರೂ ಕೋವಿಡ್ ಟ್ರೀಟ್ಮೆಂಟ್ ನಿಂದ ಮುಕ್ತಿ ಹೊಂದದ ಹಿನ್ನಲೆ ವೈದ್ಯರ ನಿಗಾದಲ್ಲೇ ಶಶಿಕಲಾ ಇರಬೇಕಿದೆ .ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಶಿಕಲಾಗೆ ಚಿಕಿತ್ಸೆ ಮುಂದುವರೆದಿದೆ

Also read:  ಹತ್ತು ವರ್ಷದ ಬಾಲಕನಿಗೆ ವಿಕೃತ ಹಿಂಸೆ ನೀಡಿ ಕೊಲೆ..!

Latest article