Wednesday, May 18, 2022

ವಾಹನದಲ್ಲಿ ನಂಬರ್​ ಪ್ಲೇಟ್​ ಬಿಟ್ಟು ಬೇರೆ ಯಾವ ಅಕ್ಷರಗಳಿದ್ರೆ ಬೀಳುತ್ತೆ ದಂಡ

Must read

ಬೆಂಗಳೂರು: ನ್ಯಾಯಾಲಯ ಒಂದು ಆದೇಶವನ್ನ ಮಾಡಿದ್ರೆ ಅದನ್ನ ಪಾಲನೆ ಮಾಡೋದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಆದರೆ, ಕೆಲ ವ್ಯಕ್ತಿಗಳು ಅದರಲ್ಲೂ ಸರ್ಕಾರಿ ಹುದ್ದೆಯಲ್ಲಿರುವವರೇ ನಿಯಮ ಮೀರಿದ್ರೆ ಕಾನೂನು ತನ್ನ ಚಾಟಿಯನ್ನ ಬೀಸುತ್ತೆ. ಇಂದು ನಿಯಮ ಮೀರಿದ ವಾಹನಗಳ ಮೇಲೆ ದಂಡ ಪ್ರಯೋಗ ಮಾಡಲಾಯ್ತು.

ಬೆಳ್ಳಂಬೆಳಗ್ಗೆಯಿಂದ ನಡೆಯುತ್ತಿರುವ ಕಾರ್ಯಾಚರಣೆ ಇದು. ಲಾಕ್​ಡೌನ್ ಎಂದು ಸುಮ್ಮನಿದ್ದ ಪೊಲೀಸರು ಮತ್ತು ಆರ್​ಟಿಓ ಅಧಿಕಾರಿಗಳು ಈಗ ಫೀಲ್ಡ್ ವರ್ಕ್ ಮುಂದುವರೆಸಿದ್ದು, ಸಾಕಷ್ಟು ಕಾರುಗಳ ಮೇಲೆ ದಂಡ ವಿಧಿಸುವ ಮುಖಾಂತರ ನೊಟೀಸ್ ನೀಡಿದ್ದಾರೆ. ನಂಬರ್ ಪ್ಲೇಟ್ ಮೇಲೆ ಕಾರಿನ ರಿಜಿಸ್ಟರ್ ನಂಬರ್ ಬಿಟ್ಟು ಬೇರ್ಯಾವ ಅಕ್ಷರಗಳೂ ಇರುವಂತಿಲ್ಲ. ಆದರೆ, ಕೆಲವರು ತಮ್ಮ ಪ್ರತಿಷ್ಟಿಯನ್ನ ತೋರಿಸಿಕೊಳ್ಳಲು ನಂಬರ್ ಪ್ಲೇಟ್​ಗಳ ಮೇಲೆ ತಮ್ಮ ಐಡೆಂಟಿಟಿಗಳನ್ನ ಹಾಕಿ ನಿಯಮ ಮೀರಿದ್ದ ಹಿನ್ನೆಲೆ ಅಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳುವ ಕಾರ್ಯಾಚರಣೆ ನಡೀತು.

ಸರ್ಕಾರದ ವಾಹನಗಳಿಗೆ G ಸಂಖ್ಯೆ ಇರುತ್ತೆ. ಆದರೆ, ಕೆಲ ಸರ್ಕಾರಿ ಕೆಲಸದಲ್ಲಿರುವ ಅಧಿಕಾರಿಗಳು ಅವರ ಖಾಸಗಿ ವಾಹನಗಳ ಮೇಲೆ ತಮ್ಮ ಹುದ್ದೇ ಮತ್ತು ಕರ್ನಾಟಕ ಸರ್ಕಾರ ಎಂದು ನಂಬರ್ ಪ್ಲೇಟ್​ನಲ್ಲಿ ನಮೂದಿಸುತ್ತಿದ್ದು ಇದು ಕಾನೂನು ಬಾಹಿರವಾಗಿದೆ. ಸರ್ಕಾರಿ ನೌಕರರಲ್ಲದೇ ಬಿಬಿಎಂಪಿ ನೌಕರರು, ಸಂಘಟನೆಯವರು ಕೂಡ ನಂಬರ್ ಪ್ಲೇಟ್ ಮೇಲೆ ತಮ್ಮ ಐಡೆಂಟಿಟಿಯನ್ನ ರಿವೀಲ್ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯೂ ಮತ್ತೊಮ್ಮೆ ಆದೇಶ ನೀಡಿದ್ರೂ ಕೂಡ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಹೀಗಾಗಿ ಇಂದು ಆರ್​ಟಿಓ ಮತ್ತು ಪೂರ್ವ ವಿಭಾಗದ ಸಂಚಾರಿ ಡಿಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 50ಕ್ಕೂ ಹೆಚ್ಚು ವಾಹನಗಳ ಮೇಲೆ ದಂಡ ವಿಧಿಸಿ ನೋಟಿಸ್​ ನೀಡಲಾಗಿದೆ.

ಇನ್ನು ಈ ಕಾರ್ಯಾಚರಣೆ ವೇಳೆ ಟಿಂಟೆಡ್ ಗ್ಲಾಸ್​ಗಳನ್ನು ಹಾಕಿಕೊಂಡು ಓಡಾಡುತ್ತಿದ್ದ ವಾಹನಗಳನ್ನ ತಡೆದು ಸನ್ ಫಿಲ್ಮ್ ಗಳನ್ನ ರಿಮೂವ್ ಮಾಡಿ ದಂಡ ವಿಧಿಸಲಾಯ್ತು. ಇನ್ನಯ ಇದೇ ಸಂಧರ್ಭದಲ್ಲಿ ಸೈಡ್ ನಂಬರ್ ಇರದ ಯೆಲ್ಲೋ ಬೋರ್ಡ್ ವಾಹನಗಳನ್ನ ಪರಿಶೀಲನೆ ನಡೆಸಿ ಅವರಿಗೂ ಫೈನ್ ಹಾಕಲಾಯ್ತು.

Also read:  ರಾಮಲಿಂಗೇಶ್ವರ ದೇವಸ್ಥಾನದ ಹುಂಡಿ ಹೊತ್ತೊಯ್ದ ಕಳ್ಳರು..!

ಸದ್ಯ ವಿಧಾನಸೌಧ ಸುತ್ತ ಮುತ್ತ ಪರಿಶೀಲನೆ ಕಾರ್ಯ ನಡೆದಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯಾಚರಣೆ ನಗರದ ವಿವಿಧೆಡೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಡಿಫಾಲ್ಟ್ ನಂಬರ್ ಪ್ಲೇಟ್ ಗಳಿದ್ದಲ್ಲಿ ಅದನ್ನ ರಿಮೂವ್ ಮಾಡುವುದು ಒಳ್ಳೆಯದು.

Latest article