Thursday, January 20, 2022

ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗೆ ರೈತರಿಂದ ಪತ್ರ

Must read

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಭದ್ರಾ ಬಫರ್ ಝೋನ್ ಜಾರಿ ವಿರೋಧಿಸಿ ರೈತರು ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಬಫರ್ ಝೋನ್ ಜಾರಿಗೂ ಮುನ್ನ ದಯಾಮರಣ ಕೋರಿ ಸಾಲೂರು, ಹೆನ್ನಂಗಿ, ಬೆಳ್ಳಂಗಿ, ಅಳೆಹಳ್ಳಿ, ಆಡುವಳ್ಳಿ, ಕೊಳಲೆ, ಮುದುಗುಣಿ, ಬಾಳೆಗದ್ದೆ, ನಂದಿಗಾವೆ, ಬೈರಾಪುರ ಗ್ರಾಮಗಳ ರೈತರು ಸಾಮೂಹಿಕ ದಯಾಮರಣಕ್ಕೆ ಪತ್ರ ಬರೆದಿದ್ದಾರೆ.

ಈ ಹಿಂದೆ ಹಲವು ಯೋಜನೆಗಳ ಮೂಲಕ ಜನರನ್ನ ಒಕ್ಕಲೆಬ್ಬಿಸಿದ್ದ ಸರ್ಕಾರ, ಇದೇ ಗ್ರಾಮಗಲಲ್ಲಿ ಪುನರ್ ವಸತಿ ಕಲ್ಪಿಸಲಾಗಿತ್ತು. ಈಗ ಮತ್ತೆ ಒಕ್ಕಲೆಬ್ಬಿಸಲು ರೂಪಿಸಿದ ಬಫರ್ ಝೋನ್ ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

Latest article