Wednesday, June 29, 2022

ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನಿಲ್ಲ: ಆರಗ ಜ್ಞಾನೇಂದ್ರ

Must read

ಚಿಕ್ಕಮಗಳೂರು: ನಕ್ಸಲ್ ನಿಗ್ರಹ ಪಡೆಯನ್ನು ಹಿಂಪಡೆಯುವ ಮಾತೇ ಇಲ್ಲ. ಶೇ. 100ರಷ್ಟು ನಿಗ್ರಹವಾಗುವ ವರೆಗೂ ನಕ್ಸಲ್ ನಿಗ್ರಹ ಪಡೆಯನ್ನು ಹಿಂಪಡೆಯಲ್ಲ. ಒಂದು ಬಾರಿ ಪರಿಚಯಿಸಿದ್ದೇವೆ, ಕಾದು ನೋಡುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹಲವು ನಕ್ಸಲರ ಬಂಧನವಾಗಿದ್ದಾರೆ. ಬೇರೆ ರಾಜ್ಯದವರು ಕ್ರಮ ಕೈಗೊಂಡಾಗ ಇಲ್ಲಿಗೆ ಬರುತ್ತಾರೆ, ಇಲ್ಲಿ ಕ್ರಮ ಕೈಗೊಂಡಾಗ ಅಲ್ಲಿಗೆ ಹೋಗ್ತಾರೆ. ಎಎನ್ಎಫ್ ಸಿಬ್ಬಂದಿ ಅಲ್ಲೇ ಇರಲಿ, ಈ ಬಗ್ಗೆ ಚರ್ಚೆಯೂ ಆಗಿದೆ. ಸದ್ಯಕ್ಕೆ ಇಲ್ಲಿ ನಕ್ಸಲ್ ಚಟುವಟಿಕೆ ಏನೂ ಇಲ್ಲ. ಎಲ್ಲರನ್ನೂ ಅರೆಸ್ಟ್ ಮಾಡಿದ್ದೇವೆ, ಅವರು ಮಾಹಿತಿ ನೀಡಿದವರನ್ನೂ ಬಂಧಿಸಿದ್ದೇವೆ. ನಕ್ಸಲ್ ಬೆಂಬಲಿಗರ ಮೇಲೂ ಕಣ್ಣಿಟ್ಟಿದ್ದೇವೆ. ಹೆಚ್ಚು-ಕಮ್ಮಿಯಾದರೆ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾತನಾಡಿ, ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನಿಲ್ಲ. ಎಲ್ಲರಿಗೂ ಒಂದೇ ಕಾನೂನು, ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕು. ತಪ್ಪಿದ್ದಾಗ ಇಡಿ ಕರೆದು ವಿಚಾರಣೆ ಮಾಡಿದಾಗ ಪ್ರತಿಭಟನೆ ಮಾಡ್ತಾರೆ. ಅವರಿಗೆ ಈ ದೇಶದ ಕಾನೂನಿನ ಬಗ್ಗೆ ಗೌರವವಿಲ್ಲ. ಕಾಂಗ್ರೆಸ್ ದೇಶದ ಜನರ ವಿಶ್ವಾಸ ಕಳೆದುಕೊಳ್ತಾರೆ, ಜನ ತುಚ್ಛವಾಗಿ ನೋಡ್ತಾರೆ.

ಮಹಾರಾಷ್ಟ್ರ ಅತೃಪ್ತ ಶಾಸಕರು ರೇಸಾರ್ಟ್ ಹೋಗಿರುವ ಕುರಿತು ಪ್ರತಿಕ್ರಿಯಿಸಿ, 2019 ಬಿಜೆಪಿ-ಶಿವಸೇನೆ ಒಟ್ಟಿಗೆ ಜನರ ಬಳಿ ಹೋಗಿದ್ದರು. ಜನರು ತೀರ್ಪು ನೀಡಿದರು. ಉದ್ಧವ್​ ಠಾಕ್ರೆ ಉದ್ಧಟತನ ಮಾಡಿ 8 ಪಕ್ಷ ಸೇರಿಸಿಕೊಂಡು ಸಿಎಂ ಆಗಿದ್ದರು. ಎಲ್ಲರಿಗೂ ಗೊತ್ತಿತ್ತು. ಇದು ಬಹಳ ದಿನ ನಡೆಯಲ್ಲ, ಈ ಸರ್ಕಾರಕ್ಕೆ ಆಯಸ್ಸು ಕಡಿಮೆ ಅಂತ. ಇಂದು ಅದರಂತೆಯೇ ಎಲ್ಲಾ ನಡೆಯುತ್ತಿದೆ. ಇದು ಮೊದಲೇ ಗೊತ್ತಿತ್ತು ಎಂದರು.

 

 

Latest article