Thursday, October 6, 2022

ಮ್ಯಾಜಿಕ್ ನಂಬರ್ 18 ತಲುಪಿ ಚಿಕ್ಕಮಗಳೂರು ನಗರಸಭೆ ಗದ್ದುಗೆ ಏರಿದ ಬಿಜೆಪಿ

Must read

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 5 ನಗರಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯತ್​ಗಳ ಚುನಾವಣೆ ಫಲಿತಾಂಶ ಇಂದು ಬಹಿರಂಗವಾಗಲಿದೆ.

ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದ್ದು, 3ನೇ ಬಾರಿ ಅಧಿಕಾರದ ಗದ್ದುಗೆ ಏರಿದೆ. ಸರಳ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, 35 ವಾರ್ಡ್​ಗಳ ಪೈಕಿ 18 ವಾರ್ಡ್​ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಕ್ಷೇತ್ರವಾಗಿರುವ ಚಿಕ್ಕಮಗಳೂರು, ಬಿಜೆಪಿ ಭದ್ರಕೋಟೆಯಾಗಿದ್ದು, ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದಲ್ಲಿ ಗೆಲ್ಲಲು ಬೇಕಾಗಿದ್ದ ಮ್ಯಾಜಿಕ್ ನಂಬರ್ 18 ತಲುಪಿ ಅಧಿಕಾರ ಪಡೆದುಕೊಂಡಿದೆ.

ನಗರಸಭೆ ಒಟ್ಟು ವಾರ್ಡ್ : 35
ಕಾಂಗ್ರೆಸ್: 08
ಬಿಜೆಪಿ : 18
ಪಕ್ಷೇತರ : 02
ಜೆಡಿಎಸ್ : 01
ಎಸ್.ಡಿ.ಪಿ.ಐ : 01

Latest article