Wednesday, May 18, 2022

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾಣೆ ಗ್ರಾಮದ 70ಕ್ಕೂ ಹೆಚ್ಚು ಜನರಿಗೆ ಜ್ವರ

Must read

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾಣೆ ಎಂಬ ಕಾಡೊಳಗಿನ ಗ್ರಾಮದ 70ಕ್ಕೂ ಹೆಚ್ಚು ಜನರು ಜ್ವರದಿಂದಾಗಿ ಹಾಸಿಗೆ ಹಿಡಿದಿದ್ದಾರೆ.

ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಅರಣ್ಯ ವ್ಯಾಪ್ತಿಗೆ ಬರುವ ದೊಡ್ಡಾಣೆ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲ. ಹೀಗಾಗಿ, ಅನಾರೋಗ್ಯ ಪೀಡಿತರನ್ನು ಡೋಲಿ ಕಟ್ಟಿಕೊಂಡು ಕಾಡಿನಲ್ಲಿ 11 ಕಿಲೋ ಮೀಟರ್ ಹೊತ್ತು ಬರಬೇಕು. ಆದ್ರೀಗ ಡೋಲಿ ಕಟ್ಟುವವರು ಕೂಡ ಜ್ವರದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಕಾಡಿನಲ್ಲಿ ನಡೆಯಲಾಗದೇ ಜನರು ನರಳಾಡುತ್ತಿದ್ದಾರೆ.

ಇಂದು ಚಿಕಿತ್ಸೆಗೆಂದು ಸುಳ್ವಾಡಿಗೆ ತೆರಳುತ್ತಿದ್ದ ದೊಡ್ಡಾಣೆ ಗ್ರಾಮದ ಮಹಿಳೆಯೊಬ್ಬರು ಸುಸ್ತಾಗಿ ದಾರಿಯಲ್ಲೇ ಮಲಗಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದರೂ ಇವರಿಗೆ ಕೊರೊನಾ ಪರೀಕ್ಷೆಯೂ, ಚಿಕಿತ್ಸೆಯೂ ಇಲ್ಲದಂತಾಗಿದೆ. ಹೀಗಾಗಿ ಜೀಪ್ ಮೂಲಕ ವೈದ್ಯರನ್ನು ಕಳುಹಿಸಿ ಚಿಕಿತ್ಸೆ ನೀಡಲು ಗ್ರಾಮಸ್ಥರ ಆಗ್ರಹಿಸಿದ್ದಾರೆ.

 

Latest article