Thursday, January 20, 2022

ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ನೀರುಪಾಲು

Must read

ಬೀದರ್: ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ನೀರುಪಾಲಾದ ದಾರುಣ ಘಟನೆ ಹಮನಾಬಾದ್​ ತಾಲೂಕಿನ ಇಸ್ಮಾಯಿಲ್ ಖಾದ್ರಿ ದರ್ಗಾ ಬಳಿ ನಡೆದಿದೆ.

ಹೈದ್ರಾಬಾದ್ ಬೊರಾಬಂಡಾ ನಿವಾಸಿಗಳಾದ ಸೈಯದ್ ಅಕ್ಬರ್ ಉಸ್ಮಾನ್ (17), ಮಹಮ್ಮದ್​ ಜುಲೇದ್ ಖಾನ್( 19), ಮಹಮ್ಮದ್​ ಫಾದಖಾನ್ ಸಲೀಂ (18) ಮತ್ತು ಸೈಯದ್ ಜುನೇದ್ (15) ಮೃತ ದುರ್ದೈವಿಗಳು.

ಇಸ್ಮಾಯಿಲ್ ಖಾದ್ರಿ ಈ ಭಾಗದ ಪ್ರಸಿದ್ಧ ದರ್ಗಾವಾಗಿದ್ದು, ಪ್ರತಿ ಗುರುವಾರ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿ ದರ್ಶನಕ್ಕೆ ಆಗಮಿಸುತ್ತಾರೆ. ಈಜಲು ಹೋದ ಯುವಕರು ಕೂಡ ದರ್ಗಾ ದರ್ಶನಕ್ಕೆ ಬಂದಿದ್ದರು.

Latest article