Thursday, January 20, 2022

600 ಕೋಟಿ ವೆಚ್ಚದ 'ಅನುಭವ ಮಂಟಪ' ನಿರ್ಮಾಣಕ್ಕೆ ಸಿಎಂ ಬಿಎಸ್​ವೈ ಚಾಲನೆ

Must read

ಬೀದರ್: ಕಲ್ಯಾಣ ಕರ್ನಾಟಕದ ಬಸವ ಕಲ್ಯಾಣದಲ್ಲಿ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವಿಶ್ವಕ್ಕೆ ಪರಿಚಯಿಸಿ ಕೊಟ್ಟ ಅನುಭವ ಮಂಟಪದ ನೂತನ ಕಟ್ಟಡ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಪಕ್ಷ ಭೇದ ಮರೆತು ಜಿಲ್ಲೆಯ ಶಾಸಕರು ಯಡಿಯೂರಪ್ಪಗೆ ಸಾಥ್ ನೀಡಿದರು.

ಕಲ್ಯಾಣ ಕರ್ನಾಕಟ ಕರ್ನಾಟಕದ ಕಿರಿಟ ಎನಿಸಿಕೊಂಡಿದ್ದ ಬೀದರ್ ಜಿಲ್ಲೆಯ ಜನತೆಯ ಹೋರಾಟಕ್ಕೆ ಫಲಸಿಕ್ಕಿದೆ. 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ವಿಶ್ವಕ್ಕೆ ಮೊದಲ ಸಂಸತ್ ಭವನ ಪರಿಚಯಿಸಿಕೊಟ್ಟಿದ್ದು ಬಸವಣ್ಣನವರು. ಬಣವಣ್ಣನವರ ಈ ಕರ್ಮಭೂಮಿಯಲ್ಲಿ ಬಸವಣ್ಣನವರು ಸಾಕಷ್ಟು ಕ್ರಾಂತಿ ಮಾಡಿದವರು.

ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ವಾಗಬೇಕೆಂದು ಜಿಲ್ಲೆಯ ಸಮಸ್ತ ಲಿಂಗಾಯತ ಸಮುದಾಯ ಹಾಗೂ ಬಸವಣ್ಣನ ಅನುಯಾಯಿಗಳ ಬೇಡಿಕೆಯಾಗಿತ್ತು. ಕೊನೆಗೂ ಸಿಎಂ ಯಡಿಯೂರಪ್ಪ ಇಂದು ಬಸವಕಲ್ಯಾಣದಲ್ಲಿ 600ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.

ಇನ್ನು ಅಡಿಗಲ್ಲು ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಸಚಿವ ರಹೀಂಖಾನ್ ಭಾಗಿಯಾಗಿದ್ದರು ಬಳಿಕ ಮಾತನಾಡಿದ ಡಿಸಿಎಂ ಸೌದಿ, ಬಸವಣ್ಣನ ನಾಡಿನಲ್ಲಿ ಅನುಭವ ಮಂಟಪ ಭೂಮಿ ಪೂಜೆ ಮಾಡಿದೆ ನಾನು ಧನ್ಯನಾದೆ ನಾನು ಮಾಡಿದ ಪೂರ್ವ ಜನ್ಮದ ಪುಣ್ಯ ನನಗೆ ಬಸವನಣ್ಣ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿಪೂಜೆಗೆ ಅವಕಾಶ ಸಿಕ್ಕಿದೆ ಎಂದರು.

ಮುಂದಿನ ಎರಡು ವರ್ಷಗಳ ಬಳಿಕ ನಮ್ಮ ನಾಯಕ ಸಿಎಂ ಬಿಎಸ್ ವೈ ಅನುಭವ ಮಂಟಪ ಉದ್ಘಾಟನೆ ಮಾಡುತ್ತಾರೆ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಇಲ್ಲಾ ಎನ್ನುವುದು ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟಪಡೆಸಿದರು.

ಬಸವ ಕಲ್ಯಾಣದಲ್ಲಿ ಬರೊಬ್ಬರಿ 600 ಕೋಟಿ ವೆಚ್ಚದಲ್ಲಿ ನಿರ್ಮಾಣ ನೂತನ ಅನುಭವ ಮಂಟಪ ಶಂಕುಸ್ಥಾಪನೆಹಾಗೂ ಅಂತರಾಷ್ಟ್ರೀಯ ಮಕ್ಕಳ ಉದ್ಯಾನವನ ಕಾಮಗಾರಿಗೆ ಚಾಲನೆ ನೀಡಿದರು. ಇತ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮುಂದಿನ ದಿನದಲ್ಲಿ ಬೇಗ ಡಿಪಿಆರ್ ಮಾಡಿ ಟೆಂಡರ್ ಮಾಡಿ ಕಾಮಗಾರಿ ಶುರು ಮಾಡಿ. ಎರಡು ವರ್ಷಗಳಲ್ಲಿ ಅನುಭವ ಮಂಟಪದ ಲೋಕಾರ್ಪಣೆ ಯಾಗಬೇಕು ಎಂದರು.

Also read:  ಭೀಕರ ಅಪಘಾತ: ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​ ಬಾರದೇ ಇಬ್ಬರ ದುರ್ಮರಣ

ಅಷ್ಟೇಅಲ್ಲ ಸಿಎಂ ಯಡಿಯೂರಪ್ಪ ಎದುರಿಗೆ ನೇರವಾಗಿ ಜಿಲ್ಲೆಯ ಸಮಸ್ಯೆ ಹೇಳಿಕೊಂಡರು. ರಾಜ್ಯದಲ್ಲಿ ಮೂರು ಬಾರಿ ಪ್ರವಾಹ ಬಂದು ಹೋಗಿದೆ ಬೇಗ ರೈತರ ಹಣ ಬಿಡುಗಡೆ ಮಾಡಿ ಎಂದು ಈಶ್ವರ್ ಖಂಡ್ರೆ ನೇರವಾಗಿ ಸಿಎಂಗೆ ಆಗ್ರಹಿಸಿದರು.

ಇನ್ನು ಕಾರ್ಯಕ್ರಮ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ,ನನ್ನದು ಯಾವುದೋ ಪೂರ್ವ ಜನ್ಮದ ಪುಣ್ಯದ ಫಲ.ನಾವೇಲ್ಲಾ ಒಟ್ಟಗಿ ಸೇರಿ ಅನುಭವ ಮಂಟಪ ಭೂಮಿ ಪೂಜೆಮಾಡಿದ್ದೆವೆ.

ಎರಡು ವರ್ಷಗಳ ಒಳಗಾಗಿ ಪೂರ್ಣಗೊಳಿಸಲು ಸೂಚಿನೆ ನೀಡಿದ್ದೆನೆ. ಈಗಾಗಲೇ ನೂರು ಕೋಟಿ ಬಿಡುಗಡೆ ಮಾಡಲಾಗಿದೆಇನ್ನೆಡು ದಿನದಲ್ಲಿ ಇನ್ನು 100 ಕೋಟಿ ಬಿಡುಗಡೆ ಮಾಡುವೆ ಕಾಮಗಾರಿ ಬೇಗ ಪೂರ್ಣಗಿಳಿಸಲು ಬಸವರಾಜ್ ಪಾಟೀಲ್ಸೇಡಂ ಅವರಿಗೆ ಸೂಚಿಸಿದ್ದೆನೆ. ಮುಂದಿನ ಎರಡು ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೊದಿಯವರೆ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

Also read:  ಕ್ಯಾಂಟೀನ್ ಗಳಿಗೆ ಬರುವವರ ಸಂಖ್ಯೆ ಅರ್ಧದಷ್ಟು ಇಳಿದಿದೆ- ಸಿದ್ದರಾಮಯ್ಯ

ಇನ್ನು ಇದಕ್ಕೂ ಮುನ್ನ ಬೆಂಗಳೂರಿನಿಂದ ನೇರವಾಗಿ ಬೀದರ್ ಗೆ ಆಗಮಿಸಿದ್ದ ಸಿಎಂ ಬೀದರ್​ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 100 ಹಾಸಿಗೆಗಳ ಸೌಲಭ್ಯಯುಳ್ಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಿದರು. 20ಕೋಟಿ ರೂ. ವೆಚ್ಚದ 100 ಬೆಡ್​ನ ಆಸ್ಪತ್ರೆ, 5.22 ಕೋಟಿ ರೂ.ನ ಬೀದರ್ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್, 4.90 ಕೋಟಿ ವೆಚ್ಚದ ಬೀದರ್ ಸರ್ಕಾರಿ ಶೂಶುಷ್ರ ಶಾಲೆ,ಕಾಲೇಜು ಕಟ್ಟಡ ಹಾಗೂ ವಿದ್ಯಾರ್ಥಿಗಳಿಗ ವಸತಿ ನಿಲಯ ನಿರ್ಮಾಣ, 2.50 ಕೋಟಿ ರೂ. ವೆಚ್ಚದ ಗ್ರಾಮೀಣ ಸಂತೆಗಳ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೈದರು.

Latest article