Thursday, January 20, 2022

ಬಸವ ಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ ಆರೋಪ

Must read

ಬೀದರ್​: ರಾಜ್ಯದಲ್ಲಿ ಉಪಚುನಾವಣೆ ಪ್ರಚಾರ ಕಾವೇರುತ್ತಿದ್ದು, ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ.

ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಪರ ಹಣ ಹಂಚಿಕೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಹಣಕ್ಕಾಗಿ ಸ್ಥಳೀಯ ಮುಖಂಡರ ನಡುವೆ ಕಿತ್ತಾಟ ನಡೆದಿದೆ. ಹಣ ಹಂಚಿಕೆ ಮಾಡುತ್ತಿದ್ದ ವ್ಯಕ್ತಿಯ ಮೇಲೆಯೇ ನೋಟಿಗಾಗಿ ಜನ ಮಗಿಬಿದ್ದಿದ್ದಾರೆ.

ರಾಜ್ಯದಲ್ಲಿ ಮೂರುಗಳಲ್ಲಿ ಉಪಚುನಾವಣೆ ರಂಗೇರುತ್ತಿದ್ದು, ಬಸವ ಕಲ್ಯಾಣದಲ್ಲಿ ಶರಣು ಸಲಗಾರ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್‌ (ಮಲ್ಲಮ್ಮ) ಪರ ಎರಡು ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಮತಪ್ರಚಾರ ನಡೆಸುತ್ತಿದ್ದಾರೆ.

Latest article