Thursday, January 20, 2022

ಉಪಚುನಾವಣೆ ಘೋಷಣೆ: ಕೈ-ಕಮಲ ಪಾಳೆಯದಲ್ಲಿ ಟಿಕೇಟ್ ಆಕಾಂಕ್ಷಿಗಳ ಲಾಬಿ ಜೋರು

Must read

ಬೀದರ್: ಬಸವಕಲ್ಯಾಣದ ಕಾಂಗ್ರೇಸ್ ಶಾಸಕ ಬಿ.ನಾರಾಯಣ್ ರಾವ್ ನಿಧನ ದ ಬಳಿಕ ತೆರವುಗೊಂಡಿದ್ದ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ನಿಗದಿಯಾಗಿದೆ. ಈ ನಡುವೆ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಬಾರೀ ಪೈಪೊಟಿ ನಡೆದಿದ್ದು, ಎರಡು ಪಕ್ಷದಲ್ಲಿ ಟಿಕೇಟ್ ಆಕಾಂಕ್ಷಿಗಳ ಲಾಭಿ ಜೋರಾಗಿದೆ.

ಬಸವಕಲ್ಯಾಣ ದ ಕಾಂಗ್ರೇಸ್ ಶಾಸಕ ಬಿ.ನಾರಾಯಣ್ ರಾವ್ ನಿಧನ ಬಳಿಕ ತೆರವು ಗೊಂಡಿದ್ದ ಕ್ಷೇತ್ರಕ್ಕೆ ಬಸವಕಲ್ಯಾಣದಲ್ಲಿ ಉಪಚುನಾವಣೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ಬಿಜೆಪಿ ಕಾಂಗ್ರೇಸ್ ಪಕ್ಷಗಳಲ್ಲಿ ಆಭ್ಯರ್ಥಿಗಳ ಪಟ್ಟಿದೊಡ್ಡದಾಗಿದೆ. ಬಸವಕಲ್ಯಾಣ ಉಪಚುನಾವಣೆ ನಿಗದಿಯಾಗುತ್ತಿದ್ದಂತೆ ಬಿಜೆಪಿ ಆಕಾಂಕ್ಷಿಗಳು ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ್ದಾರೆ. ರಾಜಧಾನಿಯಲ್ಲಿ ಆಕಾಂಕ್ಷಿಗಳು ತಮ್ಮತಮ್ಮ ಆಪ್ತ ನಾಯಕರ ಭೇಟಿಗಾಗಿ ಕಸರತ್ತು ನಡೆಸಿದ್ದು ಟಿಕೇಟ್​ಗಾಗಿ ಕೊನೆಯ ಪ್ರಯತ್ನ ನಡೆಸುತ್ತಿದ್ದಾರೆ.

ಬಸವಕಲ್ಯಾಣದಲ್ಲಿ ಲಿಂಗಾಯತ ಸಮುದಾಯ ಪ್ರಭಾವ ಇರೋ ಹಿನ್ನೆಲೆಯಲ್ಲಿ, ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಗುಮಾನಿಗಳು ಎದ್ದಿವೆ. ಇದರ ನಡುವೆ ಡಿಸಿಎಂ ಲಕ್ಷ್ಮಣ್ ಸೌದಿ ಅವರ ಹೆಸರು ಸಹ ಕೇಳಿ ಬಂದಿದೆ. ಸ್ಥಳೀಯ ಬಿಜೆಪಿ ಟಿಕೇಟ್ ಆಕಾಂಕ್ಷಿಗಳಲ್ಲಿ ಸಾಕಷ್ಟು ಅಸಮಾಧಾನ ಹೊಗೆ ಶುರುವಾಗಿತ್ತು. ಬಿಜೆಪಿಯಲ್ಲಿ ಉಪಚುನಾವಣೆಯಲ್ಲಿ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ.

ಒಂದು ಕಡೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ರೇಸಿನಲ್ಲಿದ್ದರೆ, ಮತ್ತೊಂದು ಕಡೆಗೆ ಜಿಲ್ಲಾ ಪಂಚಾಯತ್ ಸದಸ್ಯ ಗುಂಡೂರೆಡ್ಡಿ, ಶರಣು ಸಲಗಾರ್ ಹಾಗೂ ಪ್ರದೀಪ್ ವಾತಡೆ ಸೇರಿದಂತೆ ಹದಿನೆಂಟಕ್ಕೂ ಹೆಚ್ಚು ಜನ ಆಕಾಂಕ್ಷಿಗಳ ಪಟ್ಟಿ ಬೆಳೆದಿದೆ. ಟಿಕೇಟ್ ಆಕಾಂಕ್ಷಿಗಳು ಈಗಾಗಲೇ ತಮ್ಮ ತಮ್ಮ ಆಪ್ತ ನಾಯಕರುಗಳಿಗೆ ಭೇಟಿಯಾಗಿ ಟಿಕೇಟ್​​ಗಾಗಿ ಬಾರೀ ಲಾಬಿ ನಡೆಸಿದ್ದಾರೆ. ಬೆಂಗಳೂರಲ್ಲಿ ಡಿಸಿಎಂ ಲಕ್ಷ್ಮಣ್ ಸೌದಿ ನಿವಾಸದಲ್ಲೂ ಒಂದು ಸುತ್ತಿನ ಮಾತು ಕತೆ ನಡೆದಿದೆ. ಲಿಂಗಾಯತ ಹಾಗೂ ಲಿಂಗಾಯತ ಹೊರತುಪಡೆಸಿ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎನ್ನುವ ತಿರ್ಮಾನಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೆಳಿ ಬಂದಿವೆ.

ಈ ನಡುವೆ ಕಳೆದ ಕೆಲ ದಿನಗಳ ಹಿಂದೆಯಷ್ಟೆ ಬಸವಕಲ್ಯಾಣಕ್ಕೆ ಡಿಸಿಎಂ ಲಕ್ಷ್ಮಣ್ ಸೌದಿ ಹಾಗೂ ವಸತಿ ಸಚಿವ ಸೂಮಣ್ಣ ಆಗಮಿಸಿದ್ದಾಗ ಮತ್ತಿಬ್ಬರು ಪ್ರಭಾವಿ ನಾಯಕರುಗಳ ಸಹೋದರರು ಬಿಜೆಪಿ ಸೆರ್ಪಡೆಯಾಗಿದ್ದು,ಟಿಕೇಟ್ ಆಕಾಂಕ್ಷಿಗಳಲ್ಲಿ ಸಾಕಷ್ಟು ಆತಂಕ ಶುರುವಾಗಿದೆ. ಒಂದು ಕಡೆ ಹುಮನಾಬಾದ್ ಕಾಂಗ್ರೇಸ್ ಶಾಸಕ ಹಾಗೂ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ಡಾ. ಸಿದ್ದುಪಾಟೀಲ್ ಬಿಜೆಪಿ ಸರ್ಪಡೆಯಾದರೆ, ಇನ್ನೊಂದೆಡೆ ನೈಸ್ ಮುಖ್ಯಸ್ಥ ಹಾಗೂ ಮಾಜಿ ಶಾಸಕ ಅಶೋಕ್ ಖೇಣಿ ಸಹೋದರನಾದ ಸಂಜಯ ಖೇಣಿ ಸಹ ಕಮಲ ಹಿಡಿದಿದ್ದು ಸಾಕಷ್ಟು ಚರ್ಚೆಗಳು ಶುರುವಾಗಿದೆ. ಬಸವಕಲ್ಯಾಣದಲ್ಲಿ ಸಿದ್ದು ಪಾಟೀಲ್ ಅಥವಾ ಸಂಜಯ್ ಖೇಣಿ ಅವರಿಗೆ ಟಿಕೇಟ್ ನೀಡಲಾಗುತ್ತೆ ಎನ್ನುವ ಮಾತುಗಳು ಶುರುವಾಗಿದೆ.

Also read:  ಭೀಕರ ಅಪಘಾತ: ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​ ಬಾರದೇ ಇಬ್ಬರ ದುರ್ಮರಣ

ಕಾಂಗ್ರೆಸ್ ಶಾಸಕರಾಗಿದ್ದ ಬಿ.ನಾರಾಯಣ್ ರಾವ್ ಅವರ ನಿಧನ ಬಳಿಕ ತೆರವು ಗೊಂಡಿದ್ದ ಬಸವಕಲ್ಯಾಣ ಕ್ಷೇತ್ರವನ್ನ ಹೇಗಾದರು ಮಾಡಿ ಕೈವಶ ಮಾಡಿಕೊಳ್ಳಲು ನಾಯಕರು ಸಾಕಷ್ಟು ರಣತಂತ್ರ ಹೆಣೆಯುತ್ತೀದ್ದಾರೆ. ದಿವಂಗತ ಬಿ.ನಾರಾಯಣ್ ಅವರ ಪತ್ನಿ ಮಾಲಾ ನಾರಾಯಣ್ ರಾವ್ ಅವರು ಅನುಕಂಪದ ಮೇಲೆ ಟೀಕೇಟ್ ನೀಡುವಂತೆ ಕೈ ನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಜತೆಯೂ ಚರ್ಚೆ ನಡೆಸಿದ್ದಾರೆ.

Also read:  ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ - ಸಿಎಂ ಬಿಎಸ್​ವೈ

ಇನ್ನು ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಪುತ್ರ ವಿಜಯ್ ಸಿಂಗ್​ ಸಹ ಬಸವಕಲ್ಯಾಣದಿಂದ ಟಿಕೇಟ್​ ಆಕಾಂಕ್ಷಿಯಾಗಿದ್ದಾರೆ. ಇತ್ತ ಎಐಸಿಸಿ ಸದಸ್ಯ ಆನಂದ ದೇವಪ್ಪ ಅವರು ಸಹ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಅಲ್ಲದೇ ಬಸವಕಲ್ಯಾಣ ದಲ್ಲಿ ಲಿಂಗಾಯತ ಹಾಗೂ ಮರಾಠ ಸಮುದಾಯ ಪ್ರಭಾವ ಹೆಚ್ಚಿರುವ ಹಿನ್ನಲೆಯಲ್ಲಿ ಈಗ ಜಾತಿ ಲೆಕ್ಕಾಚಾರ ಶುರುವಾಗಿದೆ. ಒಂದು ಕಡೆ ಬಿಜೆಪಿ ಪದೇ ಪದೇ ಲಿಂಗಾಯತ ಸಮುದಾಯ ಒಂದಕ್ಕೆ ಟೀಕೇಟ್ ನೀಡುತ್ತಿದ್ದು ಈ ಬಾರಿ ಬೆರೆ ಸಮುದಾಯದವರಿಗೆ ಟೀಕೇಟ್ ನೀಡಿದರೆ ಬಸವಕಲ್ಯಾಣದಲ್ಲಿ ಗೆಲ್ಲುವುದು ಕಟ್ಟಿಟ್ಟ ಬುತ್ತಿ ಅಂಥಾ ಲೆಕ್ಕಾಚಾರದಲ್ಲಿ ಇದ್ರೆ, ಇತ್ತ ಕಾಂಗ್ರೆಸ್ ಪ್ರತಿಬಾರಿಯೂ ಅಭ್ಯರ್ಥಿಗಳ ಬದಲಾವಣೆ ಮಾಡುತ್ತಲ್ಲೆ ಇದ್ದು, ಕಳೆದ ಬಾರಿ ಚುನಾವಣೆಯಲ್ಲಿ ಕೋಲಿ ಸಮುದಾಯಕ್ಕೆ ಸೇರಿರುವ ಬಿ.ನಾರಾಯಣ್ ರಾವ್ ಅವರನ್ನ ಕಣಕ್ಕಿಳಿಸಿತ್ತು. ಲಿಂಗಾಯತ ಸಮುದಾಯದ ಮಲ್ಲಿಕಾರ್ಜುನ ಖೊಬಾ ಜೆಡಿಎಸ್ ತೊರೆದು ಬಿಜೆಪಿ ಸೆರ್ಪಡೆಯಾಗಿ ಸೊಲು ಅನುಭವಿಸಿದ್ದು ಇಲ್ಲಿ ಸ್ಮರಿಸಬಹುದು.

ಅಷ್ಟೆಅಲ್ಲ ಜೆಡಿಎಸ್ ಪಿ.ಜಿ ಆರ್ ಸಿಂಧ್ಯಾ ಅವರನ್ನು ಕಣಕ್ಕಿಳಿಸಿತ್ತು. ರಜಪೂತ್ ಸಮಾಜಕ್ಕೆ ಸೇರಿರುವ ವಿಜಯ್ ಸಿಂಗ್ ಅವರ ಪ್ರಭಾವವು ಬಸವ ಕಲ್ಯಾಣದಲ್ಲಿ ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್ ನಿಂದ ವಿಜಯ್ ಸಿಂಗ್ ಸ್ಪರ್ದೆ ಮಾಡಿದರೆ ಕಾಂಗ್ರೇಸ್ ಹಾಗೂ ಬಿಜೆಪಿ ನಡುವೆ ನೇರ ಹಣಾ ಹಣಿ ನಡೆಯಲಿದೆ ಎನ್ನುವ ಮಾತು ಕೇಳಿ ಬಂರುತ್ತೀವೆ.

Latest article