Thursday, January 20, 2022

ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ – ಸಿಎಂ ಬಿಎಸ್​ವೈ

Must read

ಬೀದರ್: ರಾಜ್ಯದಲ್ಲಿ ಕೊರೊನಾ ಹೆಚ್ಚಾಗ್ತಿರೋದು ನಿಜ. ಸೋಂಕು ಹೆಚ್ಚಿರುವ ಜಿಲ್ಲೆಯಲ್ಲಿ ನೈಟ್​ಕರ್ಫ್ಯೂ ಮಾಡಲಾಗಿದ್ದು, ರಾತ್ರಿ 10ರಿಂದ ಬೆಳಗ್ಗೆ5ರ ವರೆಗೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.

ಈ ಸಂಬಂಧ ಬೀದರ್​ನ ಬಸವಕಲ್ಯಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಬೇರೆ ಬೇರೆ ಜಿಲ್ಲೆಗಳಲ್ಲಿ ಜಾಸ್ತಿ ಆದರೆ ಅಲ್ಲೂ ನೈಟ್ ಕರ್ಫ್ಯೂ. ಜನ ಜಾಗೃತರಾಗಬೇಕು. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜನ ಸಹಕಾರ ಮಾಡಿದರೆ ಸೋಂಕು ಕಂಟ್ರೊಲ್ ಸಾಧ್ಯ. ಇನ್ನೊಂದು ವಾರ ಕಾಯ್ದು ನೋಡುತ್ತೇವೆ. ಪ್ರಕರಣ ಜಾಸ್ತಿ ಆದರೆ ಎಲ್ಲೆಲ್ಲಿ ಏನೇನು ಮಾಡಬೇಕು ಹೇಳುತ್ತೇನೆ ಎಂದು ಹೇಳಿದರು.

ಸದ್ಯ ಇದೆ ೧೭ರಂದು ಉಪಚುನಾವಣೆ ನಡೆಯಲಿದೆ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ನಾಳೆ ವಾಪಸ್ ಹೋಗುತ್ತೇನೆ. ಬಸವರಾಜ ಸೇಡಂಗೆ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯದ ಜವಾಬ್ದಾರಿ ವಹಿಸಲಾಗಿದೆ. ಅಂತರಾಷ್ಟ್ರೀಯ ಪ್ರವಾಸಿತಾಣವಾಗಿ ಬಸವಕಲ್ಯಾಣ ಬದಲಾಗುತ್ತೆ. ಈ ನಾಡಿನ ಅಭಿವೃದ್ಧಿಯೇ ನಮ್ಮ ಗುರಿ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿ ಪಟವಾಗುತ್ತೆ ಎಂದರು.

ಕಾಂಗ್ರೆಸ್ ಮೂರರಲ್ಲಿ ಗೆಲ್ಲಲಿದೆ ಎಂಬ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಖರ್ಗೆಯವರು ಹಿರಿಯರು ಅವರ ಬಗ್ಗೆ ಗೌರವವಿದೆ. ೨೫ ಸಾವಿರ ಮತಗಳ ಅಂತರದಿಂದ ನಾವು ಗೆಲುತ್ತೇವೆ. ಬಸವಕಲ್ಯಾಣದಲ್ಲಿ ನಾವು ಗೆಲ್ಲುತ್ತೇವೆ ಎಂದಿದ್ದಾರೆ.

ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಾರಿಗೆ ನೌಕರರು ಗೌರವದಿಂದ ಸೇವೆಗೆ ಹಾಜರಾಗಬೇಕು. ಕೆಲಸಕ್ಕೆ ಹಾಜರಾಗದವರಿಗೆ ಸಂಬಳ ನೀಡಲ್ಲ ಎಂದು ಸಿಎಂ ಬಿಎಸ್​ವೈ ಅವರು ಹೇಳಿದ್ದಾರೆ.

Latest article