Wednesday, May 18, 2022

ಸಿಡಿಲು ಬಡಿದು ತಂದೆ-ಮಗ ಸೇರಿ ಮೂವರ ದಾರುಣ ಸಾವು

Must read

ವಿಜಯನಗರ: ಸಿಡಿಲು ಬಡಿದು ತಂದೆ ಮಗ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ (34), ಮೈಲಾರಿ (11), ಉಪ್ಪಾರ ಹನುಮಂತಪ್ಪ (35) ಮೃತ ದುರ್ದೈವಿಗಳು.

ನಿನ್ನೆ ಸಂಜೆ ಹಗರಿಬೊಮ್ಮನಹಳ್ಳಿ ಕೆಳಭಾಗದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಮೃತರು ಆಡು ಮೇಯಿಸಲು ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಎರಡು ಆಡುಗಳು ಸಹ ಸಾವನ್ನಪ್ಪಿವೆ.

ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Latest article