ಬಳ್ಳಾರಿ: ದೇಶಭಕ್ತಿ ಇರುವವರು ಯಾರೂ ಬಿಪಿನ್ ರಾವತ್ ಸಾವು ಸಂಭ್ರಮಿಸುವುದಿಲ್ಲ. ದೇಶಭಕ್ತರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.
ಸುದದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿನ್ ರಾವತ್ ದೊಡ್ಡ ದೇಶಭಕ್ತರು. ಅಂತಹವರನ್ನು ಕಳೆದುಕೊಂಡಿದ್ದಕ್ಕೆ ಬಹಳ ದುಃಖವಾಗಿದೆ. ವಿಮಾನ ಪತನ ಸಹಜವಾಗಿ ಆಗಿದೆ ಅಂತ ಅನ್ನಿಸುತ್ತೆ ಎಂದರು.