ಬಳ್ಳಾರಿ: ಮೆದು ಕಬ್ಬಿಣ ಕೈಗಾರಿಕಾ ಘಟಕಗಳು ಹೊರಹಾಕುವ ಧೂಳಿನಿಂದ ಬಳ್ಳಾರಿ ಜಿಲ್ಲೆಯ ಹಲವು ಗ್ರಾಮಗಳ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಈ ಭಾಗದ ಜನರು ನಿರಂತರವಾಗಿ ಧೂಳಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮನೆಯ ಬಳಿ ಪ್ರತಿನಿತ್ಯ ಒಂದೊಂದು ಇಂಚಿನಷ್ಟು ಧೂಳು ಸಂಗ್ರವಾಗುತ್ತಿದೆ. ಕುಡತಿನಿ, ವೇಣಿ ವೀರಾಪುರ, ಸುಲ್ತಾನಪುರ ಸೇರಿದಂತೆ ವಿವಿಧ ಗ್ರಾಮದ ಜನರು ಧೂಳಿನಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೋಗಗಳ ಭೀತಿ ಎದುರಿಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಾವಾಗಿಲ್ಲ. ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದಾರೆ.