ಬಳ್ಳಾರಿ: ಜಿಲ್ಲೆಯ ಸಂಡೂರು ತಹಶೀಲ್ದಾರ್ ರಶ್ಮಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತಹಶೀಲ್ದಾರ್ ವರ್ಗಾವಣೆಯ ಹಿಂದೆ ಶಾಸಕ ತುಕರಾಂ ಪ್ರಭಾವಿದೆ ಎನ್ನುವ ನೇರ ಆರೋಪ ಕೇಳಿಬಂದಿದೆ.
ಶಾಸಕ ತುಕರಾಂ ತಹಶೀಲ್ದಾರ್ ರಶ್ಮಿ ವಿರುದ್ಧ ಹತ್ತಾರು ಆರೋಪ ಮಾಡಿದ್ದು, ಕಚೇರಿಗೆ ಹೋದರೆ ತಮಗೆ ಗೌರವ ಕೊಡಲ್ಲ ಎಂದು ಗರಂ ಆಗಿದ್ದರು. ಇದನ್ನು ವೈಯಕ್ತಿಕ ಪ್ರತಿಷ್ಠೆಗೆ ತೆಗೆದುಕೊಂಡ ಶಾಸಕರು ತಹಶೀಲ್ದಾರ್ ರಶ್ಮಿ ಅವರನ್ನು ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಶಾಸಕ ತುಕರಾಂ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಮಣಿದ ಸರ್ಕಾರ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಸರ್ಕಾರದ ಸೂಚನೆಯಂತೆ ರಶ್ಮಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.