Tuesday, August 16, 2022

ಬಿಜೆಪಿಯವರು ನಕಲಿ ದೇಶ ಭಕ್ತರು, ಕಾಂಗ್ರೆಸ್​ನವರು ದೇಶ ಭಕ್ತರು: ಈಶ್ವರ ಖಂಡ್ರೆ

Must read

ಬಳ್ಳಾರಿ: ಯಾವ ಮುಖ ಇಟ್ಟುಕೊಂಡು ಮೋದಿ, ಅಮಿತ್ ಶಾ ರಾಜ್ಯಕ್ಕೆ ಬರ್ತಾರೆ. ಕೊರೊನಾ ಸಾವಿನಲ್ಲಿ ಕೂಡ ಸುಳ್ಳು ಲೆಕ್ಕ. ಬಿಜೆಪಿ ಸರ್ಕಾರಕ್ಕೆ ಮಾನವೀಯತೆ ಇಲ್ಲ. 1 ಕೋಟಿ 30 ಲಕ್ಷ ಮಕ್ಕಳಲ್ಲಿ ಜಾತಿ ವಿಷ ಬಿತ್ತುವ ಕೆಲಸ ಸರ್ಕಾರ ಮಾಡಿದೆ ಎಂದು ಮಾಜಿ‌ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಹೋಗಿದೆ. ಪ್ರತಿಪಕ್ಷದ ಧ್ವನಿ ಅಡಗಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಂವಿಧಾನದ ಕಗ್ಗೋಲೆ ಬಿಜೆಪಿ ಮಾಡಿದೆ. ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್ ಹೋರಾಟ ಮಾಡಲಿದೆ. ರಾಜ್ಯದಲ್ಲಿ, ಜಿಲ್ಲೆಯಲ್ಲಿ ಯಾವುದೇ ಬಣ ಇಲ್ಲ, ನಮ್ಮದು ಕಾಂಗ್ರೆಸ್ ಬಣ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಅಭಿಪ್ರಾಯ ಭೇದಗಳಿವೆ, ಅದನ್ನು ಸರಿಪಡಿಸಿದ್ದೇವೆ.

ದೇಶದಲ್ಲಿ ಬಿಜೆಪಿಯಿಂದ ಕೋಮು ದಳ್ಳುರಿ. ಬಿಜೆಪಿಯವರು ನಕಲಿ ದೇಶ ಭಕ್ತರು, ಕಾಂಗ್ರೆಸ್​ನವರು ದೇಶ ಭಕ್ತರು. ಗುತ್ತಿಗೆ ಸಂಘದ ಕೆಂಪಣ್ಣ ಮೋದಿಗೆ ಪತ್ರ ಬರೆದಿದ್ದಾರೆ. ಬಿಜೆಪಿಯ ನಾಯಕರು ಲೂಟಿ ಮಾಡುವದರಲ್ಲಿ ತಲ್ಲೀನ. ಬಿಜೆಪಿ ಪಕ್ಷಕ್ಕೆ ಒಂದು ಕಾನೂನು ,ಬೇರೆ ಪಕ್ಷಕ್ಕೆ ಒಂದು ಕಾನೂನು. ಇಡಿ, ಸಿಬಿಐ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಬಹಳ ದಿನ ನಡೆಯಲ್ಲ, ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.

ಬಳ್ಳಾರಿ ಕಾಂಗ್ರೆಸ್​ನ ಭದ್ರಕೋಟೆ. ಬಳ್ಳಾರಿಯಲ್ಲಿ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್. ಬಿಜೆಪಿಯಿಂದ ಬರೀ ಲೂಟಿ-ಲೂಟಿ. ಅಕ್ರಮ ಗಣಿಗಾರಿಕೆ ಮಾಡುವ ಮೂಲಕ ಬರೀ ಭ್ರಷ್ಟಾಚಾರ ಮಾಡಿದೆ. ಯುವ ಜನರನ್ನು ಹಾದಿ ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಸಾಕಷ್ಟು ಜನಪರ ಕೆಲಸ ಮಾಡಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ.

3 ವರ್ಷದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದೇ ಒಂದು ನೇಮಕಾತಿ ಮಾಡಿಲ್ಲ. ಸಬ್ ಇನ್ಸ್​ಪೆಕ್ಟರ್ ನೇಮಕಾತಿಯಲ್ಲಿ ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದೆ. ಬಳ್ಳಾರಿ ಭಾಗದಲ್ಲಿ ನೀರಾವರಿ ಯೋಜನೆ, ಚತುಷ್ಪಥ ರಸ್ತೆ ಮಾಡಿಲ್ಲ. ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಬೆಂಬಲಿಸಲು ಮನೆ-ಮನೆಗೆ ತೆರಳಿ ಪ್ರಚಾರ ಮಾಡಬೇಕು ಎಂದರು.

Also read:  ಎಲ್ಲಾ ವಿಭಾಗದಲ್ಲಿ ಎಡವಿದ ಮೋದಿ: ಮನಮೋಹನ್ ಸಿಂಗ್ ಆರೋಪ

Latest article