Thursday, January 20, 2022

ಎಟಿಎಂ ದೋಚಲು ಬಂದಿದ್ದ ದುಷ್ಕರ್ಮಿಗಳಿಂದ ಬ್ಯಾಂಕ್ ಸೆಕ್ಯೂರಿಟಿ ಬರ್ಬರ ಕೊಲೆ..?

Must read

ಬಳ್ಳಾರಿ : ಎಟಿಎಂ ದೋಚಲು ಬಂದಿದ್ದ ದುಷ್ಕರ್ಮಿಗಗಳು ಬ್ಯಾಂಕ್ ಸೆಕ್ಯೂರಿಟಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬಳ್ಳಾರಿ ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಬಸವರಾಜ ಕೊಲೆಯಾದ ವ್ಯಕ್ತಿ. ಪ್ರತಿಷ್ಠಿತ ರಾಯಲ್ ವೃತ್ತದ ಅನತಿ ದೂರದಲ್ಲಿ ಇರುವ ಬ್ಯಾಂಕ್ ಎಟಿಎಂ ಬಳಿ ಈ ಘಟನೆ ನಡೆದಿದೆ. ಎಟಿಎಂ ಮತ್ತು ಐಸಿಐಸಿಐ ಬ್ಯಾಂಕ್ ಅಕ್ಕಪಕ್ಕದಲ್ಲಿಯೇ ಇದೆ. ಎಟಿಎಂ ಪಕ್ಕದ‌ ಬ್ಯಾಂಕ್ ಸ್ಥಳದಲ್ಲಿ ಸೆಕ್ಯೂರಿಟಿ ಗಾರ್ಡ್ ಬಸವರಾಜ ಮಲಗಿದ್ದಾಗ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್ ಅಥವಾ ಎಟಿಎಂ ದರೋಡೆಗೆ ಬಂದಿದ್ರೋ ಅಥವಾ ಖಾಸಗಿ ವಿಚಾರವಾಗಿ ಕೊಲೆಯಾಗಿದೆಯೋ ಎಂಬುದು‌ ಇನ್ನಷ್ಟೇ ತಿಳಿದುಬರಬೇಕಿದೆ. ಹುಬ್ಬಳ್ಳಿ ಮೂಲದ ಸೆಕ್ಯೂರಿಟಿ ಬಸವರಾಜ ಕಳೆದ ಹತ್ತು ತಿಂಗಳ‌ ಹಿಂದೆ ಕೆಲಸಕ್ಕೆ ಸೇರಿದ್ದರು.

Latest article