ವಿಜಯನಗರ: ಹಂಪಿ ವಿಶ್ವವಿದ್ಯಾಲಯದಲ್ಲಿ ಭೋಧಕೇತರ ಸಿಬ್ಬಂದಿ ನೇಮಕದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪ ಮಾಡಿದೆ.
ವಿಶ್ವವಿದ್ಯಾಲಯದ ಅಧಿಕಾರಿಗಳ ದುರಾಡಳಿತ ನಡೆ ಅಧಿಕಾರಿಗಳಿಗೆ ಬೇಸರ ತರಿಸಿದೆ. ವಿಶ್ವವಿದ್ಯಾಲಯದಲ್ಲಿ ನಿಯಮ ಬಾಹಿರವಾಗಿ ಭೋಧಕೇತರ ಹುದ್ದೆ ಭರ್ತಿಗೆ ಮುಂದಾಗಿದೆ. ಹುದ್ದೆ ಗಿಟ್ಟಿಸಿಕೊಳ್ಳಲು ₹50 ರಿಂದ ₹60 ಲಕ್ಷ ಹಣ ನೀಡಿರುವುದಾಗಿ ಹಲವರು ಕರೆ ಮಾಡಿದ್ದಾರೆ. ಕಾನೂನು ಘಟಕದ ಅಧೀಕ್ಷಕ ಸೋಮನಾಥ ಅವರ ನೇಮಕಾತಿ ಸರಿಯಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪ ಮಾಡಿದೆ.
ಈ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ವಿಶ್ವವಿದ್ಯಾಲಯ ಕುಲಪತಿ ರಮೇಶ್, ನಿಮ್ಮಲ್ಲಿ ದಾಖಲೆಗಳಿದ್ದರೆ ದೂರು ಕೊಡಿ. ನಾವು ಯಾವ ತನಿಖೆಗೆ ಬೇಕಾದರೂ ಸಿದ್ಧ. ಇದು ರಕ್ಷಣಾ ವೇದಿಕೆ ಅಧ್ಯಕ್ಷರ ಬ್ಲ್ಯಾಕ್ಮೇಲ್ ತಂತ್ರ. ಅವರಿಗೆ ತಾಕತ್ ಇದ್ದರೆ ಕನ್ನಡದ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ಸಮರ ಸಾರಲಿ. ವಿಶ್ವವಿದ್ಯಾಲಯ ವಿರುದ್ಧ ಸಮರ ಸಾರುವುದು ಸರಿಯಲ್ಲ ಎಂದಿದ್ದಾರೆ.
ಇನ್ನು ಬಳ್ಳಾರಿ ಹಾಗೂ ವಿಜಯನಗರ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಹಂಪಿ ವಿಶ್ವವಿದ್ಯಾಲಯ ಕರವೇ ಅಧ್ಯಕ್ಷ ನಾರಾಯಣಗೌಡರಿಗೆ ಸವಿಸ್ತಾರವಾಗಿ ಪತ್ರ ಬರೆಯಲು ಮುಂದಾಗಿದೆ ಎನ್ನಲಾಗಿದೆ.