Tuesday, May 17, 2022

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 8 ತಿಂಗಳ ಅವಧಿಯಲ್ಲಿ 400 ಶಿಶುಗಳ ಮರಣ

Must read

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಳೆದ 8 ತಿಂಗಳ ಅವಧಿಯಲ್ಲಿ 400 ಶಿಶುಗಳು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಖಾಸಗಿ ಆಸ್ಪತ್ರೆಗಳ ವೆಚ್ಚ ಭರಿಸಲಾಗದೇ ಮನೆಯಲ್ಲೇ ಹೆರಿಗೆ ಮಾಡಿಸುತ್ತಿದ್ದಾರೆ. ಕೆಲ ತಾಲೂಕು ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಷಿನ್​ ಇಲ್ಲದ ಕಾರಣ ಹೊಸಪೇಟೆ ಹಾಗೂ ಬಳ್ಳಾರಿಗೆ ಬರುವ ಪರಿಸ್ಥಿತಿಯಿದೆ. ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗೆ 10 ರಿಂದ 20 ಸಾವಿರದವರೆಗೆ ಹಣ ಪಡೆದರೆ, ಸಿಜೇರಿಯನ್​ ಹೆರಿಗೆಗೆ 70 ಸಾವಿರಕ್ಕೂ ಅಧಿಕ ಹಣ ಪಡೆಯಲಾಗುತ್ತದೆ.

ಇಷ್ಟೊಂದು ಹಣ ಭರಿಸಲಾಗದೇ, ಜನರು ಹಳ್ಳಿಗಳಲ್ಲಿ ಸೂಲಗಿತ್ತಿಯರಿಂದ ಹೆರಿಗೆ ಮಾಡಿಸುತ್ತಿದ್ದಾರೆ. ಹೀಗಾಗಿ, ಇಷ್ಟು ಪ್ರಮಾಣದಲ್ಲಿ ಶಿಶುಗಳು ಮರಣ ಹೊಂದುತ್ತಿವೆ.

Latest article