Thursday, January 20, 2022

ಭಾರಿ ಮಳೆಗೆ ಅಪಾರ ಪ್ರಮಾಣದ ಮೆಣಸಿನಕಾಯಿ ನೀರುಪಾಲು: ಸಂಕಷ್ಟದಲ್ಲಿ 30ಕ್ಕೂ ಹೆಚ್ಚು ರೈತರು

Must read

ಬಳ್ಳಾರಿ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಅಪಾರ ಪ್ರಮಾಣದ ಮೆಣಸಿನಕಾಯಿ ನೀರುಪಾಲಾಗಿದೆ.

ಮೆಣಸಿನಕಾಯಿ ಕಟಾವಿನ ಬಳಿಕ ಏಳುಬೆಂಚಿ ಗ್ರಾಮದ ಪಾಂಡುರಂಗ ದೇವಾಲಯ ಆವರಣದಲ್ಲಿ ಒಣಗಿಸಲು ಹಾಕಲಾಗಿತ್ತು. ಆದರೆ, ರಾತ್ರಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಮೆಣಸಿನಕಾಯಿ ನೀರು ಪಾಲಾಗಿದ್ದು, 30ಕ್ಕೂ ಹೆಚ್ಚು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುಮಾರು 9 ಲಕ್ಷಕ್ಕೂ ಅಧಿಕ ಮೌಲ್ಯದ ಮೆಣಸಿನಕಾಯಿ ನೀರಿನಲ್ಲಿ ತೇಲಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

 

Latest article