Tuesday, August 16, 2022

ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಕೊಲೆಗೈದಿದ್ದ ಆರೋಪಿಗಳು ಅರೆಸ್ಟ್

Must read

ಬಳ್ಳಾರಿ: ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದ ಆರೋಪಿಗಳನ್ನು ಸಿಸಿಟಿವಿ ದೃಶ್ಯ ಆಧರಿಸಿ ಬಂಧಿಸಲಾಗಿದೆ.

ಛತ್ತೀಸ್​ಗಡದ ರಾಯಘಡ ಗ್ರಾಮದ ಅಜಾದ್ ಸಿಂಗ್, ಅಂಗದ್ ಸಿಂಗ್ ಮತ್ತು ಜಗತ್ ಸಿಂಗ್ ಬಂಧಿತ ಆರೋಪಿಗಳು. ನವೆಂಬರ್​ 23ರಂದು ಬಳ್ಳಾರಿಯ ಪ್ರತಿಷ್ಠಿತ ರಾಯಲ್ ವೃತ್ತದ ಅನತಿ ದೂರದಲ್ಲಿ ಇರುವ ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಬಸವರಾಜನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ವೈಯಕ್ತಿಕ ದ್ವೇಷದ ಕೊಲೆ ಎನ್ನಲಾಗಿದ್ದರೂ, ನಂತರ ಎಟಿಎಂ ದರೋಡೆ ಮತ್ತು ಬ್ಯಾಂಕ್ ದರೋಡೆಗಾಗಿ ನಡೆದ ಕೊಲೆ ಎನ್ನುವುದು ದೃಢಪಟ್ಟಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಬ್ರೂಸ್ ಪೇಟೆ ಪೊಲೀಸರು, ಕೊಲೆ ಮಾಡಿ ಕಾರೇಕಲ್ ಗ್ರಾಮದ ಕೊಠಡಿಯಲ್ಲಿ ನೆಲಸಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಬ್ಯಾಂಕ್ ರಾಬರಿ ಮಾಡುವ ಉದ್ದೇಶದಿಂದ ಕೊಲೆ ಮಾಡಿರುವುದು ಬಯಲಾಗಿದೆ. ಬಂಧಿತರು ಸಹೋದರರಾಗಿದ್ದು, ಮೊದಲ ಬಾರಿ ಕಳ್ಳತನಕ್ಕೆ ಯತ್ನಿಸಿ ಪೊಲೀಸರ ಅತಿಥಿಗಳಾಗಿದ್ದಾರೆ. ಆರೋಪಿಗಳು ಹಗರಿ ಗ್ರಾಮದ ಬಳಿ‌ಯಿರುವ ಗ್ಯಾಸ್​ಲೈನ್​ ಕೆಲಸ ಮಾಡುತ್ತಿದ್ದರು.

Latest article