Tuesday, May 17, 2022

ಬಳ್ಳಾರಿ ಉಸ್ತುವಾರಿಯನ್ನ ಶ್ರೀರಾಮುಲು ಅವರಿಗೆ ನೀಡಿ: ಶಾಸಕ ಸೋಮಶೇಖರ್ ರೆಡ್ಡಿ

Must read

ಬಳ್ಳಾರಿ: ಬಳ್ಳಾರಿ ಉಸ್ತುವಾರಿಯನ್ನ ಶ್ರೀರಾಮುಲು ಅವರಿಗೆ ನೀಡಿ. ವಿಜಯನಗರ ಜಿಲ್ಲೆ ರಚನೆಯಾದ ಮೇಲೆ ಆನಂದ್​ ಸಿಂಗ್ ಹುಮ್ಮಸ್ಸಿನಲ್ಲಿದ್ದಾರೆ. ಅವರಿಗೆ ಬಳ್ಳಾರಿ ಉಸ್ತುವಾರಿ ಒತ್ತಡವಾಗಿದೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.

ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆನಂದ್​ ಸಿಂಗ್ ಬಳ್ಳಾರಿ ಉಸ್ತುವಾರಿ ಮರೆತ್ತಿದ್ದಾರೆ. ಅವರ ಭಾರ ಕಡಿಮೆಯಾಗಬೇಕು. ಶ್ರೀರಾಮುಲು ಅವರ ಭಾರ ಜಾಸ್ತಿಯಾಗಬೇಕು. ಹೀಗಾಗಿ, ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿ ಎಂದರು.

ಸೋಮಶೇಖರ್ ರೆಡ್ಡಿ ಹೇಳಿಕೆಯಿಂದ ವೇದಿಕೆಯಲ್ಲಿ ಕುಳಿತಿದ್ದ ಸಚಿವ ಆನಂದ್​ ಸಿಂಗ್ ಮುಜುಗರಕ್ಕೊಳಗಾದರು. ಶಾಸಕ ಸೋಮಶೇಖರ್ ರೆಡ್ಡಿ ಈ ಹಿಂದೆ ಬಳ್ಳಾರಿ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

Latest article