Friday, January 21, 2022

ಕೊರೊನಾದಿಂದ ಮೃತರಾದ ಸಾರಿಗೆ ಸಿಬ್ಬಂದಿಗೆ ಸಿಗದ ಪರಿಹಾರ: ಬೀದಿಗೆ ಬಿದ್ದ ಕುಟುಂಬಗಳು

Must read

ಬೆಳಗಾವಿ: ಕೊರೊನಾ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಕೊರೊನಾದಿಂದ 287 ಸಾರಿಗೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮೃತರಾದವರ ಪ್ರತೀ ಕುಟುಂಬಕ್ಕೆ ₹30 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈವರೆಗೂ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಪರಿಹಾರ ವಿತರಣೆ ಆಗಿದೆ. ಆದರೆ ಈಗ ಸರ್ಕಾರ ಎಲ್ಲರಿಗೂ ಪರಿಹಾರ ನೀಡಿದ್ದೇವೆ ಎಂದು ಹೇಳುತ್ತಿದ್ದು,  ಅರ್ಧದಷ್ಟು ಕುಟುಂಬಗಳು ಪರಿಹಾರ ಸಿಗದೇ ಪರದಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಸಾರಿಗೆ ನೌಕರರಾದ ಡಿ.ಆರ್​​.ಬೆಟ್ಟ ಸೂರಕರ ಮತ್ತು ಸಂಜಯ ನಾಯಕ ಕೊರೊನಾದಿಂದ ಮೃತಪಟ್ಟಿದ್ದರು. ಆದರೆ ಈ ಕುಟುಂಬಗಳಿಗೆ ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಮನೆಗೆ ಆಧಾರವಾಗಿದ್ದವರ ಸಾವಿನ ಬಳಿಕ ಈ ಕುಟುಂಬಗಳು ಅಕ್ಷರಶಃ ಬೀದಿ ಬಿದ್ದಿವೆ ಎಂದು ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ.

ಇನ್ನು ಸಂಜಯ ಪತ್ನಿ ಶ್ವೇತಾ ಮತ್ತು ಬೆಟ್ಟಸೂರಕರ ಪತ್ನಿ ಗುಲಶಾನ್ ಅವರು ಕೂಡ ತಮ್ಮ ಅಳಲು ತೋಡಿಕೊಂಡಿದ್ದು, ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Latest article