Tuesday, August 16, 2022

ಇಂದು ಗೋವಾಕ್ಕೆ ಆಗಮಿಸಲಿರುವ ಶಿವಸೇನೆಯ ರೆಬಲ್ ಶಾಸಕರ ದಂಡು

Must read

ಬೆಳಗಾವಿ: ಮಹಾರಾಷ್ಟ್ರದ ಶಿವಸೇನೆಯ ರೆಬಲ್ ಶಾಸಕರ ದಂಡು ಇಂದು ಅಸ್ಸಾಂನ ಗುವಾಹಟಿಯಿಂದ ಗೋವಾಗೆ ಆಗಮಿಸಲಿದ್ದು, ಗೋವಾದ ತಾಜ್ ಗೇಟ್‌ ವೇ ಹೋಟೆಲ್‌ನಲ್ಲಿ ತಂಗಲಿದ್ದಾರೆ.

ಹೀಗಾಗಿ, ಗೋವಾ ಹೋಟೆಲ್ ಮುಂದೆ ಪೊಲೀಸರು ಬ್ಯಾರಿಕೇಡ್​ ಹಾಕುತ್ತಿದ್ದಾರೆ. ರೆಬಲ್ ಶಾಸಕರು ಒಂದು ವಾರದಿಂದ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದರು. ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೋರ್ಡೋಲಾಯ್ ವಿಮಾನ ನಿಲ್ದಾಣದಿಂದ ಇಂದು ಸಂಜೆ 5.30ಕ್ಕೆ ಪಣಜಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಶಿವಸೇನೆ ಹಾಗೂ ಪಕ್ಷೇತರ ಶಾಸಕರು ಸ್ಪೈಸ್ ಜೆಟ್ ವಿಮಾನದಲ್ಲಿ ಆಗಮಿಸಲಿದ್ದಾರೆ.

ಗೋವಾದ ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ ಕಾರ್ಯಕರ್ತರಿಂದ ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ಪಣಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಏಕನಾಥ್​ ಶಿಂಧೆ ಟೀಂ ಬಿಗಿ ಭದ್ರತೆಯಲ್ಲೇ ತಾಜ್ ಗೇಟ್‌ ವೇ ಹೋಟೆಲಿಗೆ ಬರಲಿದ್ದಾರೆ.

Latest article