Tuesday, August 16, 2022

ಈ ಬಾರಿ ಕೂಡ ಕರ್ನಾಟಕದಿಂದ ಕಾಂಗ್ರೆಸ್ ಪುಟಿದೇಳುವ ಶಕ್ತಿ ಕೊಡಬೇಕು: ಲಕ್ಷ್ಮೀ ಹೆಬ್ಬಾಳ್ಕರ್

Must read

ಬೆಳಗಾವಿ: ಎಂಟು ತಿಂಗಳಲ್ಲಿ ಚುನಾವಣೆ ಬರುತ್ತಿದ್ದು, ಮೂರು ಪಕ್ಷಗಳಲ್ಲಿ ಚುನಾವಣೆ ತಯಾರಿ ನಡೆದಿದೆ. ನಾವು ಈ ಬಾರಿ ಕಾನ್ಫಿಡೆಂಟ್ ಆಗಿ ಇದ್ದೇವೆ. ಜನರಿಗೆ ತಿಳವಳಿಕೆ ಹೇಳ್ತೇವೆ, ಜನರನ್ನು ಒಲಿಸಿಕೊಳ್ಳುವ ವಿಶ್ವಾಸ ಕಾಂಗ್ರೆಸ್‌ನವರಿಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಕುರಿತು ಮಾತನಾಡಿ, ಇಡೀ ದೇಶದಲ್ಲಿ ಇವತ್ತು ಕಾಂಗ್ರೆಸ್‌‌ಗೆ ಕಷ್ಟದ ಸಂದರ್ಭ. ಇಂದಿರಾಗಾಂಧಿ ಕಷ್ಟದಲ್ಲಿ ಇದ್ದಾಗ, ಕಾಂಗ್ರೆಸ್ ಕಷ್ಟದಲ್ಲಿ ಇದ್ದಾಗ ಕರ್ನಾಟಕದಿಂದ ಕಾಂಗ್ರೆಸ್‌ ಪುಟಿದೇಳಿತು. ಅದೇ ರೀತಿ ಈ ಬಾರಿ ಕೂಡ ಕರ್ನಾಟಕದಿಂದ ಕಾಂಗ್ರೆಸ್ ಪುಟಿದೇಳುವ ಶಕ್ತಿ ಕೊಡಬೇಕು. ಅದಕ್ಕೆ ಸರ್ಕಾರ ರಚನೆ ಮಾಡಲೇಬೇಕು ಅಂತ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸವದತ್ತಿಯಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ಕುರಿತು ಮಾತನಾಡಿ, ಸವದತ್ತಿ ಕ್ಷೇತ್ರ ವಾಸ್ತವಿಕವಾಗಿ ಕಾಂಗ್ರೆಸ್ ಕ್ಷೇತ್ರ. ಸವದತ್ತಿ ಕ್ಷೇತ್ರದಲ್ಲಿ ಗೆಲ್ಲಬೇಕು ಅನ್ನೋದು ನಮ್ಮೆಲ್ಲರ ಉದ್ದೇಶ. ಗೆಲ್ಲಿಸಬೇಕು ಅಂತ ಸತೀಶ್ ಜಾರಕಿಹೊಳಿ ಕೆಲಸ ಮಾಡ್ತಿದ್ದಾರೆ. ನಮ್ಮ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ಭಾಗದಲ್ಲಿ ಕಾಂಗ್ರೆಸ್ ತಳಮಟ್ಟದಿಂದ ಕಟ್ಟುತ್ತಿದ್ದಾರೆ. ಸವದತ್ತಿಯಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ನನ್ನ ಗಮನಕ್ಕೆ ಬಂದಿಲ್ಲ, ನೋಡಬೇಕು ಎಂದರು.

ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದ ಪ್ರಕರಣದ ಕುರಿತು ಮಾತನಾಡಿ, ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕೆಂದು ನಾನು ಆಗ್ರಹ ಮಾಡ್ತೀನಿ. ನೂಪುರ್ ಶರ್ಮಾ ಮಾತನಾಡಿದ್ದು ತಪ್ಪು. ಹಾಗಂತ ದುಷ್ಕರ್ಮಿಗಳು ಟೈಲರ್ ಹತ್ಯೆ ಮಾಡಿದ್ದನ್ನು ಕಠಿಣ ಶಬ್ದಗಳಿಂದ ಖಂಡಿಸುವೆ. ಕಾನೂನು ಕೈಗೆ ತೆಗೆದುಕೊಂಡು ವಿಡಿಯೋ ಮಾಡ್ತಾರಂದ್ರೆ? ಅವರು ನಮ್ಮ ದೇಶದಲ್ಲಿ ಇದ್ದಾರಾ ಹೊರಗಡೆ ಇದ್ದಾರಾ? ಅವರಿಗೆ ಭಯ, ಭಕ್ತಿ ಏನೂ ಇಲ್ವಾ? ಅಂತವರಿಗೆ ಕಠಿಣ ಶಿಕ್ಷೆ ಆಗಬೇಕು ಅಂತ ಆಗ್ರಹ ಮಾಡ್ತೀನಿ ಎಂದು ಹೇಳಿದರು.

Latest article