Tuesday, August 16, 2022

ರಾಮನಗರವನ್ನು ಜಿಲ್ಲೆಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ: ಸಚಿವ ಡಾ.ಅಶ್ವಥ್ ನಾರಾಯಣ

Must read

ಬೆಳಗಾವಿ: ರಾಮನಗರ ಜಿಲ್ಲೆಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ. ಇವರು ಎಲ್ಲಾ ಮಿತಿಯನ್ನ ಮೀರಿಬಿಟ್ಟಿದ್ದಾರೆ. ಇಷ್ಟ ಬಂದ ಹಾಗೆ ಇರಬಹುದು ಎಂಬ ಯೋಚನೆ ಬಂದಿದೆ. ಇದಕ್ಕೆ ಕೊನೆ ಹೇಳುವ ಕೆಲಸ ಪ್ರಾರಂಭವಾಗಿದೆ ಎಂದು ಡಿಕೆಶಿ ಬ್ರದರ್ಸ್ ವಿರುದ್ಧ ಸಚಿವ ಡಾ.ಅಶ್ವಥ್ ನಾರಾಯಣ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಹೀಗೆ ಅಮಾಯಕರ ಮೇಲೆ ಮೆರೆಯುತ್ತಿದ್ದಾರೆ. ಇದಕ್ಕೆ ಜ‌ನರೇ ಕೊನೆ ಹಾಡಲಿದ್ದಾರೆ. ಬರೀ ಗಲಾಟೆ ಮಾಡೋದು ಅಲ್ಲ. ಪುಂಡಾಟಿಕೆ ಮಾಡೋದು ಅಲ್ಲ. ನಾನು ಬಂದಿರೋದು ಕೆಲಸ ಮಾಡಲು. ಜನರು ಒಳ್ಳೆಯ ನಾಯಕತ್ವ ಬಯಸುತ್ತಾರೆ. ಜನರ ಧ್ವನಿಯಾಗಲು ಬಯಸುತ್ತಾರೆ. ನಮ್ಮ ಸಾಧನೆ ಜನರ ಪರ ಕೆಲಸ ಮಾಡೋದು ಆಗಬೇಕು.

ಇದನ್ನ ಬಿಟ್ಟು ಮಸ್ಕಿರಿ ಮಾಡೋದು, ತಮ್ಮ ಪ್ರತಿಷ್ಠೆಯನ್ನ ಸರ್ಕಾರದ ಕಾರ್ಯಕ್ರಮದಲ್ಲಿ ತೋರಿಸುವುದು, 50 ಜನ ಹಿಂಬಾಲಕರನ್ನ ಇಟ್ಟುಕೊಳ್ಳುವುದು, ಎಲ್ಲಾ ಕಡೆ ಪುಂಡಾಟ ಪ್ರದರ್ಶನ ಮಾಡೋದು, ವಾತಾವರಣವನ್ನೆ ಹಾಳು ಮಾಡುವುದು, ಕಾರ್ಯಕ್ರಮ ಹಾಳು ಮಾಡುವುದು ಆಗಿದೆ. ರಾಮನಗರ ಜಿಲ್ಲೆಯನ್ನ ಖಂಡಿತಾ ಬಿಜೆಪಿ ಕೈಗೆ ತೆಗೆದುಕೊಳ್ಳುತ್ತೇವೆ ಎಂದರು.

Latest article