Tuesday, August 16, 2022

ವಿಷಾಹಾರ ಸೇವಿಸಿ ಬೆಳಗಾವಿಯಲ್ಲಿ ತಾಯಿ-ಮಗ ಸಾವು

Must read

ಬೆಳಗಾವಿ: ವಿಷಾಹಾರ ಸೇವಿಸಿ ತಾಯಿ-ಮಗ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ನಡೆದಿದೆ.

ತಾಯಿ ಪಾರ್ವತಿ ಮಳಗಳಿ (53) ಮತ್ತು ಮಗ ಸೋಮನಿಂಗಪ್ಪ ಮಳಗಳಿ (28) ಮೃತ ದುರ್ದೈವಿಗಳು. ಭಾನುವಾರ ಕೆಲಸಕ್ಕೆಂದು ಹೊಲಕ್ಕೆ ತೆರಳಿದ್ದ ತಾಯಿ-ಮಗ, ಸಂಜೆ ಮನೆಗೆ ಬಂದು ಬಜ್ಜಿ ಸೇವಿಸಿದ್ದಾರೆ. ಬಳಿಕ ಇಬ್ಬರೂ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ.

ವಿಷಯ ತಿಳಿದ ಸ್ಥಳೀಯರು ತಾಯಿ-ಮಗನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ. ನಿನ್ನೆ ಮರಣೋತ್ತರ ಪರೀಕ್ಷೆ ನಡೆಸಿ ತಾಯಿ, ಮಗನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Latest article