ಬೆಳಗಾವಿ ತಾಲೂಕಿನ ಮುಚ್ಚಂಡಿ, ಜಾಡ್ ಶಾಹಾಪುರ್, ಬೀಜಗರ್ಣಿ, ಬೆಳಗುಂದಿ, ಹಲಗಾ ಸೇರಿ 33ಕ್ಕೂ ಹೆಚ್ಚು ಗ್ರಾಮಗಳು ಬೆಳಗಾವಿಯ ರಿಂಗ್ ರೋಡ್ ಗೆ ವಿರೋಧಿಸುತ್ತಿದ್ದಾರೆ. 1300ಎಕರೆ ಜಮೀನು ಕಳೆದುಕೊಳ್ಳುವ ಭೀತಿಯ ಹಿನ್ನೆಲೆ ಎಂಇಎಸ್ ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಯೋಜನೆ ವಿರೋಧಿಸಿ ಪಾದಯಾತ್ರೆ ಮೂಲಕ ಬಾರುಕೋಲು ಚಳುವಳಿ, ಡೊಳ್ಳು ಬಾರಿಸುತ್ತಾ ಡಿಸಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜೀವ ಬಿಟ್ಟೇವು ಜಮೀನು ಕೊಡುವುದಿಲ್ಲಾ ಎಂದು ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಕುಟುಂಬಕ್ಕೆ ಕುಟುಂಬವೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು. ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.