Wednesday, June 29, 2022

ಕೊಲೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಬೇಡಿ: ಸತೀಶ್ ಜಾರಕಿಹೊಳಿ ಎಚ್ಚರಿಕೆ

Must read

ಬೆಳಗಾವಿ: ಸತೀಶ್​ ಪಾಟೀಲ್ ಕೊಲೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಬೇಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ‌ತಿರುಗಿ ಸತೀಶ್​ ಪಾಟೀಲ್ (37) ಎಂಬಾತನ ಕೊಲೆಯಲ್ಲಿ ಅಂತ್ಯವಾಗಿತ್ತು. ಬಳಿಕ ನಡೆದ ಹಿಂಸಾಚಾರದಲ್ಲಿ 10ಕ್ಕೂ ಹೆಚ್ಚು ವಾಹನಗಳು, ಮೇವಿನ ಬಣವೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಳೆಯ ವೈಷಮ್ಯ ಹಾಗೂ ಕಾರು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿ ತಾಲೂಕಿ ಗೌಂಡವಾಡ ಗ್ರಾಮದ ಸತೀಶ್ ಪಾಟೀಲ್ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಗ್ರಾಮದ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡರು. ಪೊಲೀಸರು ಮತ್ತು ಆರೋಪಿಗಳಿಂದ ನಮಗೆ ಭಯ ಕಾಡುತ್ತಿದೆ. ಮನೆಯಲ್ಲಿ ಇರುವ ಗಂಡು ಮಕ್ಕಳನ್ನು ಪೊಲೀಸರು ಅರೆಸ್ಟ್ ಮಾಡ್ತಿದ್ದಾರೆ. ಅಮಾಯಕರನ್ನು ಬಂಧಿಸುತ್ತಿದ್ದಾರೆ ಎಂದು ದೂರಿದರು.

ಮಹಿಳೆಯರಿಂದ ದೂರು ಹಿನ್ನೆಲೆಯಲ್ಲಿ ನೇರವಾಗಿ ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿದ ಸತೀಶ್ ಜಾರಕಿಹೊಳಿ, ಅಮಾಯಕರನ್ನ ಬಂಧಿಸಬೇಡಿ. ಉಳಿದ ಕೊಲೆ ಆರೋಪಿಗಳನ್ನು ಅರೆಸ್ಟ್ ಮಾಡಿ ಎಂದು ಪೊಲೀಸ್ ಕಮೀಷನರ್ ಬೋರಲಿಂಗಯ್ಯಾ, ಡಿಸಿಪಿ ರವೀಂದ್ರ ಗಡಾದಿ ಜೊತೆಗೆ ಚರ್ಚೆ ಮಾಡಿದರು. ಅದರಲ್ಲೂ ಕಾಕತಿ ಪೊಲೀಸರ ನಡೆ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.

Latest article