Tuesday, May 17, 2022

ಹಾಡಹಗಲೇ ಮಹಿಳೆಯನ್ನು ಗುಂಡಿಕ್ಕಿ ಕೊಂದ ಕೇಸ್​: ಬಿಜೆಪಿ ಪುರಸಭೆ ಸದಸ್ಯ ಅರೆಸ್ಟ್

Must read

ಬೆಳಗಾವಿ: ಸಂಕೇಶ್ವರ ಪಟ್ಟಣದಲ್ಲಿ ನಡೆದ ಮಹಿಳೆಯ ಶೂಟೌಟ್ ಪ್ರಕರಣ ಸಂಬಂಧ ಬಿಜೆಪಿ ಪುರಸಭೆ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಸಂಕೇಶ್ವರ ವಾರ್ಡ ನಂಬರ್ 14ರ ಪುರಸಭೆ ಸದಸ್ಯ ಉಮೇಶ ಕಾಂಬಳೆ ಬಂಧಿತ ಆರೋಪಿ.

ಆರೋಪಿ ಉಮೇಶ ಕಾಂಬಳೆ, ಶೈಲಾ ನಿರಂಜನ‌ ಸುಭೇದಾರ ಎನ್ನುವ ಮಹಿಳೆಯಿಂದ 25 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ. ಮಹಿಳೆ ಸಾಲ ವಾಪಸ್​ ಕೇಳಿದಾಗ ಆಕೆ ಮೇಲೆ ಕೋಪಗೊಂಡ ಉಮೇಶ ಜನವರಿ 16ರಂದು ಮಹಿಳೆಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಸಂಕೇಶ್ವರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾದ ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Latest article