Wednesday, June 29, 2022

TV5 IMPACT: ಸರ್ಕಾರಿ ಶಾಲೆ ದುರಸ್ತಿಗೆ ಹಣ ಬಿಡುಗಡೆ ಮಾಡಿದ ಜಿಲ್ಲಾಡಳಿತ

Must read

ಬೆಳಗಾವಿ: ಜಿಲ್ಲೆಯ ರಾಮದುರ್ಗ ಮುದೇನೂರ ಸರ್ಕಾರಿ ಶಾಲೆ ದುರಸ್ತಿಗಾಗಿ ಜಿಲ್ಲಾಡಳಿಯ ಹಣ ಮಂಜೂರು ಮಾಡಿದೆ.

ರಾಮದುರ್ಗ ಮುದೇನೂರ ಸರ್ಕಾರಿ ಶಾಲೆಯ ಕುಂದುಕೊರತೆ ಬಗ್ಗೆ ಟಿವಿ5 ವಿಸ್ತೃತ ವರದಿ ಮಾಡಿತ್ತು. ವರದಿ ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸರ್ಕಾರಿ ಶಾಲೆ ದುರಸ್ತಿಗೆ ಮುಂದಾಗಿದೆ.

ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್​ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, 20 ಲಕ್ಷ ರೂಪಾಯಿ ಅನುದಾನದಲ್ಲಿ ಶಾಲೆ ಅಭಿವೃದ್ಧಿಗೆ ಕ್ರಮಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿಯಿಂದ 10 ಲಕ್ಷ, ತಾಲೂಕು ಪಂಚಾಯಿತಿ,ಗ್ರಾಮ ಪಂಚಾಯಿತಿಯಿಂದ ತಲಾ 5 ಲಕ್ಷ ಅನುದಾನಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಂಡು ಶಾಲೆ ದುರಸ್ತಿ ಮಾಡಲಾಗುತ್ತದೆ. ಇಂದಿನಿಂದಲೇ ಕೊಠಡಿಗಳ ದುರಸ್ತಿ ಕಾರ್ಯ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

Latest article