Thursday, October 6, 2022

ಉತ್ತಮ ಸೇವೆಯಲ್ಲಿ ದೇಶದಲ್ಲಿ 12ನೇ ಸ್ಥಾನ ಪಡೆದ ಬೆಳಗಾವಿ ಬಿಮ್ಸ್​: ಖುಷಿ ಹಂಚಿಕೊಂಡ ಸಚಿವ ಗೋವಿಂದ​ ಕಾರಜೋಳ

Must read

ಬೆಳಗಾವಿ: ಅಖಿಲ ಭಾರತ ಮಟ್ಟದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಬೆಳಗಾವಿ ಬಿಮ್ಸ್‌ಗೆ 12ನೇ ಸ್ಥಾನ ಪಡೆದುಕೊಂಡಿದೆ.

ಈ ಬಗ್ಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ​ ಕಾರಜೋಳ ವಿಡಿಯೋ ಹೇಳಿಕೆ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.

ದೇಶದ 13 ಸಂಸ್ಥೆಗಳ ಆಯ್ಕೆಯಲ್ಲಿ ಬಿಮ್ಸ್‌ಗೆ 12ನೇ ಸ್ಥಾನ ಪಡೆದಿರುವುದು ಅತ್ಯಂತ ಸಂತೋಷದ ಸಂಗತಿ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬಿಮ್ಸ್ ವ್ಯವಸ್ಥೆ ಬಗ್ಗೆ ಟೀಕೆ ಮಾಡಲಾಗಿತ್ತು. ಕೋವಿಡ್ ವೇಳೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹೀಗಾಗಿ ಅಂದಿನ ಸಿಎಂ‌ ಬಿಎಸ್‌ ಯಡಿಯೂರಪ್ಪ ಬಳಿ ವಿಶೇಷ ಅಧಿಕಾರಿ ನೇಮಕಕ್ಕೆ ಮನವಿ ಮಾಡಿದ್ದೇವು. ಹೀಗಾಗಿ ವಿಶೇಷ ಆಡಳಿತಾಧಿಕಾರಿಯಾಗಿ ಆರ್‌ಸಿ ಆದಿತ್ಯ ಅಮ್ಲಾನ್ ಬಿಸ್ವಾಸ್ ನೇಮಕ ಮಾಡಲಾಗಿತ್ತು. ಇದಾದ ಬಳಿಕ ಸುಧಾರಣೆಯಾಗಿ ರಾಜ್ಯದಲ್ಲಿ ಉತ್ತಮ ವೈದ್ಯಕೀಯ ವಿಜ್ಞಾನ ಸಂಸ್ಥೆಯಾಗಿದೆ.  ಇದು ನಮಗೆ ಸಂತೋಷ ಮತ್ತು ಹೆಮ್ಮೆ ತರುವ ವಿಷಯ. ಶಿಕ್ಷಣ ಗುಣಮಟ್ಟದಲ್ಲಿ ದೇಶದಲ್ಲೇ 8 ನೇ ಸ್ಥಾನದಲ್ಲಿದ್ದೇವೆ. ಮೂಲಸೌಕರ್ಯ, ಆಡಳಿತ ವಿಚಾರದಲ್ಲಿ 12ನೇ ಸ್ಥಾನದಲ್ಲಿದ್ದೇವೆ. ಇದಕ್ಕಾಗಿ ದುಡಿದ ಬಿಮ್ಸ್‌ನ ಎಲ್ಲಾ ಸಿಬ್ಬಂದಿ ಹಾಗೂ ವೈದ್ಯರಿಗೆ ಧನ್ಯವಾದಗಳು. ಬಿಮ್ಸ್ ಸಿಬ್ಬಂದಿ, ವೈದ್ಯರು, ವಿಶೇಷ ಆಡಳಿತಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ ಪ್ರಯತ್ನದಿಂದ ಉತ್ತಮ ಸಂಸ್ಥೆಯಾಗಿ ಬೆಳೆದಿದೆ ಇದನ್ನು ಮುಂದುವರಿಸಿಕೊಂಡು ಹೋಗಲು ಉಳಿದವರು ಪ್ರಯತ್ನಿಸಲಿ ಎಂದಿದ್ದಾರೆ.

Latest article