Tuesday, October 26, 2021

ನೈತಿಕ ಪೊಲೀಸ್​ಗಿರಿ: ಯುವಕ-ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 9 ಆರೋಪಿಗಳು ಅರೆಸ್ಟ್​

Must read

ಬೆಳಗಾವಿ: ಜಿಲ್ಲೆಯಲ್ಲಿ ಆಟೋ ಚಾಲಕರು ನಡೆಸಿದ್ದ ನೈತಿಕ ಪೊಲೀಸ್​​ಗಿರಿ ಪ್ರಕರಣ ಸಂಬಂಧ ಮತ್ತೆ ಆರು ಆರೋಪಿಗಳನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 13ರಂದು ರಾಯಬಾಗ ಮೂಲದ ಹಿಂದೂ ಯುವಕ ಹಾಗೂ ಹುಕ್ಕೇರಿ ಮೂಲದ ಮುಸ್ಲಿಂ ಯುವತಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಇಳಿದು ಆಟೋ ಹತ್ತುತ್ತಾರೆ. ಈ ವೇಳೆ ಯಾವುದಾದರೂ ಉದ್ಯಾನವನಕ್ಕೆ ಕರೆದುಕೊಂಡು ಹೋಗುವಂತೆ ಚಾಲಕನಿಗೆ ಸೂಚಿಸುತ್ತಾರೆ. ಹಿಂದೂ ಯುವಕ ಹಾಗೂ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ, ಆಟೋ ಚಾಲಕ ದಾವತ್​ ಆಟೋವನ್ನು ಉದ್ಯಾನವನದ ಬದಲಾಗಿ ನಿರ್ಜನ ಪ್ರದೇಶಕ್ಕೆ ತಿರುಗಿಸುತ್ತಾನೆ.

ಬಳಿಕ ಅಮನ ನಗರದ ನಿರ್ಜನ ಹೊಲಕ್ಕೆ ಕರೆದುಕೊಂಡು ಹೋಗಿ 20 ಮಂದಿ ಇಬ್ಬರ ಮೇಲೆ ರಾಡ್ ಹಾಗೂ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜೊತೆಗೆ ಅವರಿಬ್ಬರ ಬಳಿಯಿದ್ದ 20 ಸಾವಿರ ಮೌಲ್ಯದ ಮೊಬೈಲ್, 50 ಸಾವಿರ ನಗದು, ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಹಲ್ಲೆಗೊಳಗಾದ ಯುವತಿ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಎ1 ಆರೋಪಿ ದಾವುದ್ ಕತೀಬ್, ಆಯುಬ್ ಹಾಗೂ ಯುಸೂಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈಗ ತಲೆ ಮರೆಸಿಕೊಂಡಿದ್ದ ಮತ್ತೆ 6 ಜನರನ್ನು ಬಂಧಿಸಲಾಗಿದೆ. ಇರ್ಫಾನ್ ಮುತವಾಲೆ, ಸಲ್ಮಾನ್ ಮುಲ್ಲಾ, ಸಮೀರ್ ಸೌದಾಗರ, ವಶೀಮ್ ಶೇಖ್, ವಶೀಮ್,ಶಾವಾಲಿ ಬಂಧಿತ ಆರೋಪಿಗಳು. ಇನ್ನು ತಲೆ ಮರೆಸಿಕೊಂಡ 11 ಜನ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

More articles

Latest article