Thursday, January 27, 2022

ಮತಾಂತರ ಮಾಡುತ್ತಿದ್ದಾರೆಂದು ದಲಿತ ಕುಟುಂಬದ ಮೇಲೆ ಹಲ್ಲೆ ಆರೋಪ

Must read

ಬೆಳಗಾವಿ: ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಡಿಸೆಂಬರ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಕವಿತಾ ಕರಗಣವಿ ಎಂಬುವವರು ತುಕ್ಕಾನಟ್ಟಿ ಗ್ರಾಮದ ಏಳು ಜನರ ವಿರುದ್ಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಪ್ರಾರ್ಥನೆ ಮಾಡುತ್ತಿದ್ದ ವೇಳೆ ಮನೆಗೆ ನುಗ್ಗಿ, ಜನರನ್ನು ಕ್ರೈಸ್ತ ಧರ್ಮಕ್ಕೆ ಏಕೆ ಮತಾಂತರ ಮಾಡಿಸುತ್ತಿದ್ದೀರಿ ಅಂತ ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಮಹಿಳೆ ಮೇಲೆ ಸುಡುವ ಸಾಂಬಾರು ಚೆಲ್ಲಲು ಯತ್ನಿಸಿದ್ದಾರೆಂದು ಉಲ್ಲೇಖಿಸಿದ್ದಾರೆ.

ತುಕ್ಕಾನಟ್ಟಿಯ ಶಿವಾನಂದ ಗೋಟೂರು, ರಮೇಶ ದಂಡಾಪೂರ, ಪರಸಪ್ಪ ಬಾಬು, ಫಕ್ಕೀರಪ್ಪ ಬಾಗೇವಾಡಿ, ಕೃಷ್ಣಾ ಕಾನಿಟ್ಕರ್, ಕಂಕನವಾಡಿಯ ಚೇತನ ಗಡಾಡಿ, ಹತ್ತರಕಿ ಗ್ರಾಮದ ಮಹಾಂತೇಶ ಹತ್ತರಗಿ ವಿರುದ್ಧ ದೂರು ದಾಖಲಾಗಿದೆ. ಘಟನೆ ನಡೆದು ಎರಡು ದಿನ ಕಳೆದರೂ ಪೊಲೀಸರು ಯಾರನ್ನೂ ಬಂಧಸಿಲ್ಲ. ಹೀಗಾಗಿ, ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ನೊಂದ ಕುಟುಂಬಸ್ಥರ ಆರೋಪಿಸಿದೆ.

Latest article