Monday, November 29, 2021

ಆರ್​ಟಿಓ ಇನ್ಸ್​ಪೆಕ್ಟರ್ ಮನೆ ಮೇಲೆ ಎಸಿಬಿ ದಾಳಿ: 1ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಸಂಪತ್ತು ಪತ್ತೆ

Must read

ಬೆಳಗಾವಿ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆರ್​ಟಿಓ ಇನ್ಸ್​ಪೆಕ್ಟರ್ ಸದಾಶಿವ ಮರಲಿಂಗಣ್ಣವರ್ ಅವರ​ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ.

ಸದಾಶಿವ ಮರಲಿಂಗಣ್ಣವರ್ ಅವರ ಗೋಕಾಕ್ ಮನೆ, ರಾಮದುರ್ಗ ತಾಲೂಕಿನ ಕಳ್ಳೂರು ಗ್ರಾಮದ ಮನೆ, ಬೆಳಗಾವಿ ರಾಮತೀರ್ಥ ನಗರದ ಮನೆ, ಸಹೋದರನ ಮುಧೋಳ ಮನೆ ಮೇಲೆಯಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ದಾಳಿ ವೇಳೆ ₹31 ಲಕ್ಷ ಮೌಲ್ಯದ ಎರಡು ಕಾರಗಳು, ₹5 ಲಕ್ಷ ಮೌಲ್ಯದ 1.135ಕೆ.ಜಿ ಬಂಗಾರ, 5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ಮನೆಯಲ್ಲಿ 8 ಲಕ್ಷ ನಗದು ಹಣ ಸೇರಿದಂತೆ ಒಟ್ಟು 1 ಕೋಟಿ 87 ಲಕ್ಷ ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ ಎನ್ನಲಾಗಿದೆ.

ಆದಾಯಕ್ಕಿಂತ 190ರಷ್ಟು ಹೆಚ್ಚಿನ ಆಸ್ತಿ ಪತ್ತೆಯಾಗಿದ್ದು ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Latest article