Monday, November 29, 2021

ಬೆಳಗಾವಿಯ ಮೂರು ಅಧಿಕಾರಿಗಳಿಗೆ ಎಸಿಬಿ ಶಾಕ್​: ಕೋಟಿ..ಕೋಟಿ ಅಕ್ರಮ ಆಸ್ತಿ ಬಯಲಿಗೆ..!

Must read

ಬೆಳಗಾವಿ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಹಕಾರ ಅಭಿವೃದ್ಧಿ ಅಧಿಕಾರಿ ಅಡಿವಿ ಸಿದ್ದೇಶ್ವರ ಮಸ್ತಿ ಅವರ ಬೈಲಹೊಂಗಲ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಡಿವಿ ಸಿದ್ದೇಶ್ವರ ಮಸ್ತಿ ಅವರ ಹೆಸರಿನಲ್ಲಿ ಬೈಲಹೊಂಗಲದಲ್ಲಿ 66 ಲಕ್ಷ ಮೌಲ್ಯದ ಎರಡು ಮನೆಯಿದ್ದು, 20 ಲಕ್ಷ ಮೌಲ್ಯದ ಮನೆ ನಿರ್ಮಾಣ ಹಂತದಲ್ಲಿದೆ. ದಾಳಿ ವೇಳೆ 44 ಲಕ್ಷ ಮೌಲ್ಯದ ನಾಲ್ಕು ನಿವೇಶನ, 20 ಲಕ್ಷ ಮೌಲ್ಯದ ಕಾರು, 11 ಲಕ್ಷ ಮೌಲ್ಯದ 263 ಗ್ರಾಂ ಚಿನ್ನಾಭಾರಣ, 5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾಗೂ 1.20 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ.

ಒಟ್ಟಾರೆ 1 ಕೋಟಿ 24 ಲಕ್ಷ ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದ್ದು, ಬ್ಯಾಂಕ್ ಡೆಪಾಜಿಟ್,‌ ಶೆರ್ಸ್, ಇನ್ಶೂರೆನ್ಸ್ ಪತ್ರಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇನ್ನು ಹೆಸ್ಕಾಂ ಅಧಿಕಾರಿ ತಾನಾಜಿ ಪಾಟೀಲ್ ಅವರ ಬೆಳಗಾವಿಯ ನಿವಾಸಿದ ಮೇಲೆ‌ ಎಸಿಬಿ ದಾಳಿ ನಡೆಸಿದ್ದು, ಆದಾಯಕ್ಕಿಂತ 240ರಷ್ಟು ಹೆಚ್ಚು ‌ಆಸ್ತಿ ಪತ್ತೆಯಾಗಿದೆ. ಸದ್ಯ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Latest article