Friday, January 21, 2022

ಕೇವಲ 1,500ರೂಪಾಯಿಗಾಗಿ ಕೊಚ್ಚಿ ಕೊಂದರು..!

Must read

ಬೆಂಗಳೂರು: ಹಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಣನಕುಂಟೆಯ ಎಕೆ ಕಾಲೋನಿ ಬಳಿ ನಡೆದಿದೆ. ಮೆಹಬೂಬ್(19) ಕೊಲೆಯಾದ ಯುವಕ.

ನಿನ್ನೆ ತಡರಾತ್ರಿ ಲಲಿತ್ ಹಾಗೂ ಮಣಿಕಂಠ ಎಂಬವರ ನಡುವೆ 1500 ರೂಪಾಯಿ ವಿಚಾರಕ್ಕೆ ಗಲಾಟೆ ಆರಂಭವಾಗಿದೆ. ಕೊಲೆಯಾದ ಮೆಹಬೂಬ್ ಲಲಿತ್ ಬಣದಲ್ಲಿದ್ದು, ಎರಡು ಗುಂಪುಗಳ ಜಗಳ ಅತಿರೇಕಕ್ಕೇರಿದ್ದು, ಆರೋಪಿಗಳು ಮೆಹಬೂಬ್​ನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಮಣಿಕಂಠ, ಪವನ್,ಕಿರಣ್, ಕಾರ್ತಿಕ್ ಸೇರಿದಂತೆ ಒಟ್ಟು 13 ಜನರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

Latest article