ಬೆಂಗಳೂರು: ನಗರದಲ್ಲಿ ವಿಕೇಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಆದರೆ ಜನರು ಕುಂಟು ನೆಪ ಹೇಳಿ ರಸ್ತೆಗಿಳಿಯುವುದನ್ನು ಮಾತ್ರ ಕಡಿಮೆ ಮಾಡುತ್ತಿಲ್ಲ.
ಎರಡು ನಾಯಿ ಮರಿಗಳ ಜೊತೆ ಬಂದ ವ್ಯಕ್ತಿಯೊಬ್ಬರು ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಘಟನೆ ಕಾರ್ಪೋರೇಶನ್ ಸರ್ಕಲ್ ಬಳಿ ನಡೆದಿದೆ.
ಬೈಕ್ನಲ್ಲಿ ಎರಡು ನಾಯಿ ಮರಿಗಳನ್ನು ಇರಿಸಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ತಡೆದಿದ್ದಾರೆ. ಎಲ್ಲಿಗೆ ಹೋಗುತ್ತಿದ್ದೀರಿ ಎನ್ನುವ ಪೊಲೀಸರ ಪ್ರಶ್ನೆಗೆ ವ್ಯಕ್ತಿ ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸಲು ಎಂದು ಸಬೂಬು ಹೇಳಿದ್ದಾರೆ.
ಇಂದೇ ಹೋಗಬೇಕಾ ನಾಳೆ ಆಗಲ್ವಾ ಎಂದು ಪೊಲೀಸರು ಪ್ರಶ್ನಿಸಿದ್ದು, ಇಲ್ಲ ಇವತ್ತೆ ಹಾಕಿಸಬೇಕು ಮೂರು ಘಂಟೆಗೊಮ್ಮೆ ನಾಯಿಗಳಿಗೆ ಫೀಡ್ ಮಾಡಬೇಕು ಬಿಡಿ ಎಂದು ವ್ಯಕ್ತಿ ವಾದ ಮಾಡಿದ್ದಾರೆ. ಕೊನೆಗೆ ಪೊಲೀಸರು ಆ ವ್ಯಕ್ತಿಯನ್ನು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.