Thursday, January 27, 2022

ಗಾಡಿ ಜೊತೆ ಹೆಂಡ್ತಿನೂ ಸೀಜ್​​ ಮಾಡಿ: ಚಿಕನ್​ ಕೊಳ್ಳಲು ಬಂದ ಪತಿಯ ಮಾತಿಗೆ ಪೊಲೀಸರೇ ಶಾಕ್​..!

Must read

ಬೆಂಗಳೂರು: ರಾಜ್ಯಾದ್ಯಂತ ವೀಕೆಂಡ್​ ಕರ್ಫ್ಯೂ ಜಾರಿಯಲ್ಲಿದ್ದು, ನಗರದಲ್ಲಿ ಪೊಲೀಸ್​​ ಬಿಗಿಬಂದೋ ಬಸ್ತ್​ ಮಾಡಲಾಗಿದೆ.

ತರ್ತು ಕೆಲಸ ಹೊರತುಪಡಿಸಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಇಂದು ಭಾನುವಾರದ ಬಾಡೂಟಕ್ಕೂ ಕರ್ಫ್ಯೂ ಅಡ್ಡಿ ಮಾಡಿದ್ದು, ಚಿಕನ್​ ಕೊಳ್ಳಲು ಬಂದ ವ್ಯಕ್ತಿಯೊಬ್ಬರು ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ.

ಮಂಜುನಾಥ್ ಎನ್ನುವವರು ಚಿಕನ್​ಕೊಳ್ಳಲು ಬಂದಿದ್ದು, ಮಾರ್ಕೆಟ್​​ ಸರ್ಕಲ್ ಬಳಿ ಪೊಲೀಸರು ಗಾಡಿ ತಡೆದಿದ್ದಾರೆ. ಈ ವೇಳೆ ಮಂಜುನಾಥ್​ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಚಿಕನ್​ ಕೊಳ್ಳಲು ಬಂದಿದ್ದೆ ಸರ್​, ಬಿಟ್ಬಿಡಿ ಸರ್​, ತರಕಾರಿ ತರೋಕೆ ಅವಕಾಶ ಕೊಟ್ಟಿದಾರೆ ಎಂದು ಮಂಜುನಾಥ್​ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಗಾಡಿ ಸೀಜ್​ ಮಾಡಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಮಂಜುನಾಥ್​ ನನ್ನನ್ನು ಮಾತ್ರ ಅಲ್ಲ, ಮನೆಗೆ ಹೋಗಿ ಹೆಂಡ್ತಿ ಮಕ್ಕಳನ್ನೂ ಕರ್ಕೊಂಡು ಬರ್ತಿನಿ. ಅವ್ರನ್ನೂ ಸೇರಿಸಿ ಎಲ್ಲಾನೂ ಸೀಜ್ ಮಾಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಂಜುನಾಥ್​ ರಂಪಾಟ ಕಂಡ ಪೊಲೀಸರು ಕೊನೆಗೂ ಬಿಟ್ಟು ಕಳುಹಿಸಿದ್ದಾರೆ.

Latest article