Thursday, January 20, 2022

ಚಿನ್ನ, ಬೆಳ್ಳಿ ಕಂಡ್ರೆ ಡೋಂಟ್​ಕೇರ್​ ಅನ್ನೋ ಆಸಾಮಿ ಕದ್ದಿದ್ದು ಬರೋಬ್ಬರಿ 2 ಕೋಟಿ ಮೌಲ್ಯದ ವಾಚ್​..!

Must read

ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಪೊಲೀಸರು ಕೂಡ ಅಲರ್ಟ್​ ಆಗಿದ್ದು, ಕಳ್ಳರಿಗೆ ಜೈಲಿನ ಮಾರ್ಗ ತೋರಿಸುತ್ತಿದ್ದಾರೆ.

ಸಾಮಾನ್ಯವಾಗಿ ಕಳ್ಳರು ಚಿನ್ನ, ಬೆಳ್ಳಿ, ನಗದು ಹೀಗೆ ಅತೀ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿಯ ಆಯ್ಕೆ ವಿಭಿನ್ನವಾಗಿದ್ದು, ಕೇವಲ ವಾಚ್​​ಗಳನ್ನಷ್ಟೇ ಟಾರ್ಗೆಟ್​​ ಮಾಡುತ್ತಿದ್ದ ಆರೋಪಿಯನ್ನು ಇಂದಿರಾ ನಗರ ಪೊಲೀಸರು ಜೈಲಿಗಟ್ಟಿದ್ದಾರೆ. ಬಿಹಾರ ಮೂಲದ ಅಖ್ತರ್ ಬಂಧಿತ ಆರೋಪಿ.

ಆರೋಪಿ ಇಂದಿರಾನಗರದ ವಾಚ್ ಅಂಗಡಿಯಲ್ಲಿ 129 ರಾಡೋ, 29 ಲಾಂಜಿನ್ ಹಾಗೂ13 ಒಮೆಗಾ ವಾಚ್ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಈ ರೀತಿ ಬೆಂಗಳೂರಿನಲ್ಲಿ ಕದ್ದ ವಾಚ್​​ಗಳನ್ನು ನೇಪಾಳದಲ್ಲಿ ಮಾರುತ್ತಿದ್ದ ಎನ್ನಲಾಗಿದೆ.

ಬಂಧಿತನಿಂದ ಸುಮಾರು ಎರಡು ಕೋಟಿ ಮೌಲ್ಯದ ವಾಚ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಇಂದಿರಾ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest article