Thursday, January 27, 2022

ಸೆರೆಲಾಕ್ ಬಾಕ್ಸ್​​​ನಲ್ಲಿ​​ ಡೇಂಜರಸ್​​ ಡ್ರಗ್ಸ್​​ ಸಾಗಾಟ: ಉಗಾಂಡ ಮಹಿಳೆ ಅರೆಸ್ಟ್​​

Must read

ಬೆಂಗಳೂರು: ರೈಲಿನಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಉಗಾಂಡ ದೇಶದ ಮಹಿಳೆಯನ್ನು ಎನ್.ಸಿ.ಬಿ ಬೆಂಗಳೂರು ವಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರೋಪಿತೆ ಸೆರೆಲಾಕ್ ಬಾಕ್ಸ್​​ನಲ್ಲಿ ಮಾದಕ ವಸ್ತುಗಳನ್ನಿಟ್ಟು ಸಾಗಾಟ ಮಾಡಲು ಯತ್ನಿಸಿದ್ದು, ಖಚಿತ ಮಾಹಿತಿ ಮೇರೆಗೆ ಎನ್.ಸಿ.ಬಿ ಅಧಿಕಾರಿಗಳು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ದಾಳಿ ಮಾಡಿದ್ದಾರೆ.

ಸದ್ಯ ಮಹಿಳೆಯನ್ನು ಬಂಧಿಸಲಾಗಿದ್ದು, 1.50 ಕೋಟಿ ಮೌಲ್ಯದ 1 ಕೆಜಿ ಮೆಥಾಂಫೆಟಮೈನ್ ಮಾದಕ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಾದಕವಸ್ತುಗಳಲ್ಲೆ ಮೆಥಾಂಫೆಟಮೈನ್ ತುಂಬಾ ಅಪಾಯಕಾರಿಯಾಗಿದ್ದು, ಇದೊಂದು ನಿಷೇಧಿತ ಡ್ರಗ್​ ಆಗಿದೆ. ಇದರ ಸೇವನೆಯಿಂದ ಹಾರ್ಟ್ ಅಟ್ಯಾಕ್, ಮೆಮೊರಿ ಲಾಸ್ ಮುಂತಾದ ಗಂಭೀರ ಸಮಸ್ಯೆ ಉಂಟಾಗುತ್ತದೆ.

Latest article