ಬೆಂಗಳೂರು: ನಗರದ ವಿಕ್ಟೋರಿಯ ಆಸ್ಪತ್ರೆಯ ಸ್ಥಿತಿ ನೋಡಿದರೆ ಎಂತವರಿಗಾದರೂ ಒಮ್ಮೆ ಎದೆ ಝಲ್ ಎನಿಸುತ್ತದೆ.
ವಿಕ್ಟೋರಿಯ ಆಸ್ಪತ್ರೆಯಲ್ಲಿ ಐಸಿಯು ಬೆಡ್ಗಳ ಕೊರತೆಯಾಗಿದ್ದು, ಆಸ್ಪತ್ರೆಯಲ್ಲಿ ಶವದ ಪಕ್ಕವೇ ಮತ್ತೋರ್ವ ರೋಗಿಗೆ ಚಿಕಿತ್ಸೆ ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ಬಡ ರೋಗಿಗಳು ಪರದಾಡುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ನನಗೆ ಈ ಆಸ್ಪತ್ರೆ ಬೇಡ ಎಂದು ರೋಗಿಗಳು ತಾವಾಗಿಯೇ ಆಸ್ಪತ್ರೆಯಿಂದ ಹೊರ ನಡೆಯುತ್ತಿದ್ದಾರೆ. ಇನ್ನೂ ಕೆಲವರು ಐಸಿಯು ಬೆಡ್ ಸಿಗದೇ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.
ಇನ್ನು ಆಸ್ಪತ್ರೆಯಿಂದ ಹೊರ ಬರಲು ಸ್ಟ್ರೆಚರ್ ಸಿಗದೇ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರು ಮೆಟ್ಟಿಲುಗಳ ಮೇಲೆ ತೆವಳುತ್ತಾ ಹೊರ ಬಂದ ದೃಶ್ಯ ಕಂಡುಬಂದಿದೆ.
ಒಟ್ಟಾರೆ ಬಡವರ ಪಾಲಿಗೆ ಸಂಜೀವಿನಿಯಾಗ ಬೇಕಾದ ಸರ್ಕಾರಿ ಆಸ್ಪತ್ರೆಗಳೇ ಈ ರೀತಿ ಅವ್ಯಸ್ಥೆಯಿಂದ ಕೂಡಿದ್ದು, ಆರೋಗ್ಯ ಸಚಿವರು ಇತ್ತ ಗಮನ ಹರಿಸ ಬೇಕಾಗಿದೆ.